ಬೆಂಗಳೂರು : ಕೇವಲ ಕಾರ್ಯಕ್ರಮಗಳನ್ನು ಭಜನೆ ಬಟನ್ ಅನ್ನು ಬಾರಿಸುವ ಮೂಲಕ ಮಾಡುವುದಲ್ಲದೆ ನಿಜವಾಗಿಯೂ ಸಮಾಜದಲ್ಲಿ ಹಿಂದುಳಿದಿರುವ ಹಾಗೂ ಬಡವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ನೆಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದು ಬೆಂಗಳೂರು ಯೂತ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ಮಸ್ತಿ ಜಾಕಿರ್ ಅಲಿ ಖಾನ್ ಅವರು ತಿಳಿಸಿದರು.
ಪ್ರವಾದಿ ಮಹಮ್ಮದರ ಜನ್ಮದಿನದ ಪ್ರಯುಕ್ತ (ಈದ್ ಮಿಲಾದ್ ಅನ್ ನಬಿ ಮುಭಾರಕ್) ಜಾಕಿರ್ ನೆತೃತ್ವದಲ್ಲಿ ಬನ್ನೇರುಘಟ್ಟ ರಸ್ತೆಯ ಬಿಟಿಎಂ ಲೇಔಟ್ ನ ಗುರಪ್ಪನಪಾಳ್ಯದಲ್ಲಿ ಬೃಹತ್ ಮೆಗಾ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ನೂರಾರು ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವಕರಾಗಿ ಮಾನವೀಯತೆ ಮೆರೆದಿದ್ದಾರೆ, ಬೆಳಿಗ್ಗೆಯಿಂದ ಸಂಜೆಜಯ ತನಕ ಈ ಒಂದು ರಕ್ತದಾನ ಶಿಬಿರವಿದ್ದು ಆರೋಗ್ಯ ತಪಾಸಣೆ ಸಹ ನಡೆಯಲಿದೆ.
ಕ್ಷೇತ್ರದ ಜನರು ಈ ಒಂದು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಹಾದಾನ ಎನ್ನುವ ಉದ್ದೇಶವನ್ನು ಇಟ್ಟುಕೊಂಡು ರಕ್ತದಾನ ಮಾಡಬೇಕೆಂದು ಸಮಾಜ ಸೇವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಮಸ್ತಿ ಜಾನಕಿ ಅಲಿ ಖಾನ್ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ರಕ್ತದಾನ ಮಾಡುವುದರಿಂದ ಆರೋಗ್ಯ ಮತ್ತೆ ಹೆಚ್ಚಾಗುವುದಲ್ಲದೆ ರಕ್ತ ಸಹ ವೃದ್ಧಿಯಾಗಲಿದೆ, ಎಲ್ಲಾ ಆರೋಗ್ಯವಂತರು ರಕ್ತದಾನವನ್ನು ಯಾವಾಗ ಬೇಕಾದರೂ ಮಾಡುವ ಮೂಲಕ ಜೀವವನ್ನು ಉಳಿಸಬಹುದಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿರುವ ಮುಸಲ್ಮಾನ್ ಬಾಂಧವರು ಹಾಗೂ ಸಾರ್ವಜನಿಕರು ಸ್ವಾಹಾ ಇಚ್ಛೆಯಿಂದ ಈ ಒಂದು ಶಿಬಿರದಲ್ಲಿ ಭಾಗವಹಿಸಿದರು. ಈ ಒಂದು ಕಾರ್ಯಕ್ರಮಕ್ಕೆ ಸಾಕಷ್ಟು ಜನ ಸ್ವಯಂ ಪ್ರೇರಿತವಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ ಅವರಿಗೆ ಧನ್ಯವಾದ ತಿಳಿಸಿದರು.
ಸಮಾಜ ಸೇವೆಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಆರೋಗ್ಯ ತಪಾಸಣೆ ಸೇರಿದಂತೆ ರಕ್ತದಾನ ಶಿಬಿರ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ವರ್ಷದ ಉದ್ದಕ್ಕೂ ನಡೆಸಿಕೊಂಡು ಬರಲಾಗುತ್ತಿದೆ, ಕ್ಷೇತ್ರದಲ್ಲಿ ಇದರಿಂದ ಉತ್ತಮವಾದಂತಹ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು ಮುಂದಿನ ಸಹ ಇದೇ ರೀತಿಯಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವ ಶಕ್ತಿ ನೀಡಲಿ ಎಂದು ತಿಳಿಸಿದರು.
Kpcc ರಾಜ್ಯ ಜಂಟಿ ಕಾರ್ಯದರ್ಶಿ ಸಲ್ಮಾನ್ ಮಾತನಾಡಿ, ಜಾಕಿರ್ ಅವರು ಪಕ್ಷ,ಧರ್ಮ ,ಜಾತಿ ,ಬೇದ ಮರೆತು ನಾವೆಲ್ಲ ಮನುಷ್ಯರು ಎಂಬ ಘೊಷ ವಾಕ್ಯದೊಂದಿಗೆ ಸಮಾಜ ಸೇವೆಯನ್ನು ಮಾಡುತಿದ್ದಾರೆ, ಯಾವುದೇ ಸರ್ಕಾರದ ಅನುದಾನವಿಲ್ಲದೆ ಸ್ವತ: ತಮ್ಮಲ್ಲಿರುವ ಹಣವನ್ನು ಖರ್ಚು ಮಾಡಿಕೊಂಡು ದೀನ,ಬಡವ,ಬಲ್ಲಿದವರಿಗೆ ಏಳಿಗೆಗಾಗಿ ಅಸ್ರಮಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ಇಂತಹವರಿಗೆ ಸೂಕ್ತ ಸ್ಥಾನಮಾನ ನೀಡಬೇಕು, ಆ ಬಗ್ಗೆ ನಾನು ಪಕ್ಷದ ಹಿರಿಯರಲ್ಲಿ ಚರ್ಚೆ ಮಾಡಿ ತಿಳಿಸುತ್ತೇನೆ ಎಂದರು.
ಇನ್ನು ಜಾಕಿರ್ ಅವರಿಂದ ಫಲಾನುಭವಿಗಳು, ಹಿತೈಷಿಗಳು,ಬೆಂಬಲಿಗರು, ಸಂಬಂಧಿಗಳು ಮಾತನಾಡಿ, ಕಳೆದ 25 ವರ್ಷಗಳಿಂದ ಮಸ್ತಿ ಜಾಕಿರ್ ಅಲಿ ಖಾನ್ ಅವರನ್ನು ನೋಡಿದ್ದೇವೆ, ಅವರಲ್ಲಿ ಬಡವರಿಗೆ ಸೇವೆ ಮಾಡುವ ಕಾಯಕವನ್ನು ನೋಡಿದ್ದೇವೆ, ಯಾವುದೆ ಧರ್ಮ ,ಜಾತಿ,ಮತ ನೋಡದೆ ಸಮಾಜ ಸೇವೆಯ ಅಡಿಯಲ್ಲಿ ತೊಡಗಿದ್ದಾರೆ, ಗುರಪ್ಪನ ಪಾಳ್ಯದಲ್ಲಿ ರಾಶಿ ರಾಶಿ ಕಸ ಬಿದ್ದು ಸಾರ್ವಕನಿಕರು ನಡೆದಾಡಲು ಬಾರದೆ ಎಣಗಾಡುತ್ತಿದ್ದರು, ಅದಕ್ಕೆ ಜಾಕಿರ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಕಸ ಕ್ಲೀನ್ ಮಾಡಿಸಿ ಸರ್ಕಾರದ ಗಮನ ಸೆಳೆದರು, ಹೀಗೆ ಆಧಾರ್ ಕಾರ್ಡ್, ಪಡಿತರ ಚೀಟಿ, SIR, ಓಟರ್ ಐಡಿ ಕಾರ್ಡ್ ಮಾಡಿಸುವ , ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡಿಸಿ ಬಡವರ ಆಶಾ ಕಿರಣವಾಗಿದ್ದಾರೆ.
ಸಮಾಜ ಸೇವೆಯಲ್ಲಿ ಜಾಕಿರ್ ಜನಾನುರಾಗಿ:
ರಾಜಕಾರಣಿಗಳು,ಜನಪ್ರತಿನಿಧಿಗಳು,ಸರ್ಕಾರದ ಅಧಿಕಾರಿಗಳು ವಾರ್ಡ್ ನ ಜನರಿಗೆ ಯಾವ ಸಹಾಯ ಮಾಡಿಲ್ಲ, ಯಾರು ಮಾಡದ ಕೆಲಸ- ಕಾರ್ಯಗಳನ್ನು ಜಾಕಿರ್ ಸಾಬ್ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಜಾಕಿರ್ ನಂತರ ಸಮಾಜಸೇವೆ ಮಾಡುವವರು ಬೇಕು, ಆಗ ಇಡೀ ಬಡಾವಣೆಯ ಜನ ಆರೋಗ್ಯ, ಜೊತೆಗೆ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು, ಅವರ ಬೆಂಬಲಕ್ಕೆ ನಾವೆಲ್ಲ ಸದಾ ನಿಲ್ಲುತ್ತೇವೆ, ಸಮಾಜ ಸೇವೆಯ ಕಾಯಕ ಇನ್ನು ಇದೇ ರೀತಿ ದೊಡ್ಡಮಟ್ಟದಲ್ಲಿ ನಡೆಸಿಕೊಂಡು ಹೋಗಲಿ ಎಂದು ದೇವರಲ್ಲಿ ಆಶಯ ವ್ಯಕ್ತಪಡಿಸಿದರು.
ಒಂದು ಹಣಿ ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಬಹುದು, ರಕ್ತದಾನ ಮಾಡುವುದರಿಂದ ಆರೊಗ್ಯ ವೃದ್ದಿಯಾಗಲಿಗೆ, ಆಸ್ಪತ್ರೆಯ ರೋಗಿಗಳಿಗೆ ರಕ್ತವು ಬೇಕಾಗುತ್ತದೆ, ಅಲ್ಲಿ ಯಾವ ಧರ್ಮ, ಜಾತಿ ಬರುವುದಿಲ್ಲ, ಮಾನವೀಯತೆ ಬಹಳ ಮುಖ್ಯ ಎಂದರು. ಇಂತಹ ರಕ್ತದಾನದ ಕ್ಯಾಂಪ್ ಗಳು ಹೆಚ್ಚಾಗಿ ನಡೆಯಬೇಕು, ಪ್ರತಿಯೊಬ್ಬರು ರಕ್ತದಾನ ಮಾಡಬಹುದು ಎಂದರು.
KPCCಯ ರಾಜ್ಯ ಜಂಟಿ ಕಾರ್ಯದರ್ಶಿ ಸಲ್ಮಾನ್ ಕನ್ನಡ ಪರ ಸಂಘಟನೆಗಳ ಮಯಖಂಡರು, ಬೆಂಗಳೂರು ಯೂತ್ ವೆಲ್ಫೇರ್ ಟ್ರಸ್ಟ್ ನ ಪದಾಧಿಕಾರಿಗಳು, ಮುಖಂಡರು, ಫಾಜಿಲ್, ಶಖೀಬ್,ಮೆಹಬೂಬ್, ಅಖಿಲ್ ಸೇರಿದಂತೆ ಸಾಕಷ್ಟು ಜನರು ಜಾಕಿ ರವರು ಸ್ನೇಹಿತರು ಬಂಧು ಬಳಗ ಹಾಗೆ ಸಮಾಜ ಸೇವಕರು ರಕ್ತದಾನ ಶಿಬಿರದಲ್ಲಿ ಉಪಸ್ಥಿತರಿದ್ದರು.