ಬೆಂಗಳೂರು(ಯಲಹಂಕ) : ಶ್ರೀ ಶನೈಶ್ಚರ ಸ್ವಾಮಿ ರಾಜಯೋಗ ಕ್ಷೇತ್ರದ ದೇವಾಲಯದಲ್ಲಿ 4ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಜಾಲ ಹೋಬಳಿಯ ಬಂಡಿ ಕೊಡಿಗೆಹಳ್ಳಿಯಲ್ಲಿ ಸೆಪ್ಟಂಬರ್ 5ರಂದು ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 8:30ರ ವರೆಗೆ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಸೇವಾ ಕರ್ತರಾದ ರಾಜಣ್ಣ ಬಿ ಎಚ್ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಲಕ್ಷ ದೀಪೋತ್ಸವದ ಕಾರ್ಯಕ್ರಮವನ್ನು ಕೋಡಿಮಠ ಮಹಾಸಂಸ್ಥಾನ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಉದ್ಘಾಟನೆ ಮಾಡಲಿದ್ದಾರೆ, ಅದೇ ರೀತಿ ಸಚಿವರಾದ ಕೃಷ್ಣ ಬೈರೇಗೌಡ,ಚಲವಾದಿ ನಾರಾಯಣಸ್ವಾಮಿ,ಶರತ್ ಬಚ್ಚೇಗೌಡ,ನಾರಾಯಣಸ್ವಾಮಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಬೆಳಿಗ್ಗೆ 10 ಗಂಟೆಗೆ ಹರಿಕಥೆ ಹಾಗೂ ಕೀರ್ತನೆಗಳು ಜರುಗಲಿವೆ. ಬೆಳಿಗ್ಗೆ 7:00 ಯಿಂದ ಶನೇಶ್ಚರ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಲ್ಲಾ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಬೇಕಾಗಿದೆ ಈ ಒಂದು ಕಾರ್ಯಕ್ರಮಕ್ಕೆ ಪಾರ್ಕಿಂಗ್ ವ್ಯವಸ್ಥೆಯನ್ನು ಸಹ ಮಾಡಲಾಗಿದ್ದು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಸಹ ಆರಕ್ಷಕ ಠಾಣೆಯಿಂದ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ,ಅದೇ ರೀತಿ ಬೆಳಿಗ್ಗೆಯಿಂದ ಸಂಜೆಯ ತನಕ ದಾಸೋಹ ಸಹ ನಡೆಯಲಿದೆ ಎಂದು ಇದೇ ವೇಳೆ ತಿಳಿಸಿದರು.ಇನ್ನೂ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಸುಮಾರು 25 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಲಿದ್ದಾರೆ ಎಂದರು.
ಇನ್ನು ಶ್ರೀ ಶನೇಶ್ಚರ ಸ್ವಾಮಿ ರಾಜಯೋಗ ಕ್ಷೇತ್ರದಲ್ಲಿ ಶನೇಶ್ವರ ಸ್ವಾಮಿಯ ಹಲವು ಪವಾಡಗಳು ವಿಶೇಷತೆಗಳು ಹಾಗೂ ಒಳಿತನ್ನು ಕಂಡಿರುವವರು ಈ ಒಂದು ದೇವಾಲಯಕ್ಕೆ ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಲಕ್ಷದೀಪೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಎಣ್ಣೆ ಬತ್ತಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಇನ್ನು ಸುದ್ದಿಗೋಷ್ಠಿಯಲ್ಲಿ ದೇವಾಲಯದ ಸೇವಾ ಕರ್ತರಾದ ರಾಜಣ್ಣ ಬಿಎಚ್ ಕೃಷ್ಣಮೂರ್ತಿ ನಾಗಣ್ಣ ಸಿ ದೇವಪ್ಪ ನಾಗರಾಜು ಬಿಎಮ್ ಮಂಜು ಬಿಆರ್ ಸಿದ್ದಪ್ಪಯ್ಯ ಬಿಕೆ ಮಂಜು ಪಿ ಕೃಷ್ಣಪ್ಪ ಜಯಣ್ಣ ನಾರಾಯಣಸ್ವಾಮಿ ಸೇರಿದಂತೆ ದೇವಾಲಯದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ ಗಣೇಶ ಭಟ್ ಸೇರಿದಂತೆ ಅನೇಕ ಸೇವಾ ಕರ್ತರು ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.