LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರೀತಿಯ ಸುತ್ತ ’ಆವರಿಸಿದೆ ಮಾನ್ಸೂನ್ ಸೀಸನ್

ಮೆಲೋಡಿ ಹಾಡುಗಳನ್ನು ಕನ್ನಡಿಗರಿಗೆ ನೀಡಿರುವ ಹಿರಿಯ ಸಂಗೀತ ಸಂಯೋಜಕ ಗಂಧರ್ವ ರಾಯ ರಾವುತ ಗ್ಯಾಪ್ ನಂತರ 'ಮತ್ತೆ ಬಂತು ಮಾನ್ಸೂನ್’ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಲಕ್ಕಿ ಫಿಲಂಸ್ ಇಂಟರ್‌ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಎಸ್.ಪಿ.ಗೋಪಿನಾಥ್, ಎಂ.ಕೆ.ರಾಮಕೃಷ್ಣ, ಡಾ.ಹೆಚ್.ಎಸ್.ಮಂಜುನಾಥ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈ ಪೈಕಿ ಎಸ್.ಪಿ.ಗೋಪಿನಾಥ್ ಮತ್ತು ಎಂ.ಕೆ.ರಾಮಕೃಷ್ಣ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳ ನಿರ್ಮಾಣ ಹಾಗೂ ವಿತರಣೆಯಲ್ಲಿ ಅನುಭವ ಹೊಂದಿರುತ್ತಾರೆ.news_1795694892_1_505.webp

ಇವರೆಲ್ಲ ಮತ್ತೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿರುವುದು ಸಿನಿಮಾಕ್ಕೆ ಹೆಚ್ಚಿನ ಶಕ್ತಿ ಬಂದಂತೆ ಆಗಿದೆ. ’ಇಟ್ಸ್ ರೈನ್‌ಬೋ ಟೈಮ್’ ಎಂಬ ಕ್ಯಾಚಿ ಅಡಿಬರಹ ಇರಲಿದೆ. ಚಿತ್ರೀಕರಣಕ್ಕೆ ಹೋಗುವ ಮುನ್ನ ಒಂದಷ್ಟು ಮಾಹಿತಿ ಹಂಚಿಕೊಳ್ಳುವ ಸಲುವಾಗಿ ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು.

  ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕರು ಮಾತನಾಡಿ, ಸಿನಿಮಾವು ಮ್ಯೂಸಿಕಲ್ ಲವ್ ಸ್ಟೋರಿಯನ್ನು ಹೊಂದಿದೆ. ಪುತ್ರ ಶ್ರೀಮಾನ್ ಗಂಧರ್ವ ಸುಂದರವಾದ ಐದು ಮೆಲೋಡಿ ಹಾಡುಗಳನ್ನು ಕೊಟ್ಟಿದ್ದಾನೆ. ರಾಜಮೌಳಿ, ಮಣಿರತ್ನಂ ಚಿತ್ರಗಳಿಗೆ ಕೆಲಸ ಮಾಡಿರುವ ಧನು ನಮ್ಮ ಚಿತ್ರಕ್ಕೆ ಕ್ಯಾಮರಾಮನ್ ಆಗಿರುತ್ತಾರೆ. ಮಂಜು(Snow) ಹೆಚ್ಚಾಗಿ ಇರುವ ಸ್ಥಳದಲ್ಲಿ ಶೂಟ್ ಮಾಡಲಾಗುವುದು. ಅದಕ್ಕೆ ಸಾಗರ, ಶರಾವತಿ ಹಿನ್ನೀರು, ಆಗುಂಬೆ ಬ್ಲಾಕ್ ಹಾಗೂ  ಜೋಗ್ ಜಲಪಾದ ತುತ್ತ ತುದಿಯಲ್ಲಿ ಶೂಟ್ ಮಾಡುವ ಆಲೋಚನೆ ಮಾಡಲಾಗಿದೆ ಎಂದರು.

ಚಿತ್ರದ ತಿರುಳು:
 
      ಪ್ರಪಂಚದಲ್ಲಿ ಪ್ರತಿಯೊಬ್ಬನು ಒಳ್ಳೆ ಪ್ರೇಮಿಯಾಗಿರುತ್ತಾನೆ. ಅವನದೇ ಆದಂತ ಪ್ರೇಮಕತೆಗಳು ಇರುತ್ತದೆ. ಪ್ರೀತಿ ಎನ್ನುವುದು ಸಾರ್ವತ್ರಿಕವಾದದು. ಮದುವೆ ಆಗಿರೋನು ಕೆಲವೊಮ್ಮೆ ಪ್ರೀತಿಯಲ್ಲಿ ಸಿಲುಕುತ್ತಾನೆ. ಸಿನಿಮಾದಲ್ಲಿ ಲವ್ ಪೊಸೆಸೀವ್, ಭಾವನಾತ್ಮಕ ಅಂಶಗಳು. ಇವುಗಳ ಸಂಗಮದಲ್ಲಿ ಆತ ಹೇಗೆ ತೊಳಲಾಡುತ್ತಾನೆ. ಕೊನೆಗೆ ಯಾರಿಗೆ ಒಲಿಯುತ್ತಾನೆ? ಎಂಬುದು ಸಿನೆಮಾದ ಒಂದೇ ಒಂದು ಏಳೆಯ ಸಾರಾಂಶವಾಗಿದೆ.news_1795694893_3_965.webp

ಒಂದೇ ಹಂತದಲ್ಲಿ 30 ದಿನಗಳ ಕಾಲ ಎಲ್ಲಾ ಕೆಲಸಗಳನ್ನು ಮುಗಿಸಿ, ಜನವರಿ ಕೊನೆ ವಾರದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆಂದು ಗಂಧರ್ವ ರಾಯ ರಾವುತ ಚಿಕ್ಕದೊಂದು ವಿವರ ನೀಡಿದರು.

    ಪಾತ್ರದ ಪರಿಚಯ :

ವೃತ್ತಿಯಲ್ಲಿ ದಂತ ವೈದ್ಯ. ಪ್ರವ್ರತ್ತಿಯಲ್ಲಿ ಕಲಾವಿದನಾಗಬೇಕೆಂಬ ಬಯಕೆ. ಅದಕ್ಕೆಂದೆ ನಿರ್ದೇಶಕರ ಬಳಿ ನಟನೆಯ ತಾಲೀಮು ನಡೆಸಿ ಕ್ಯಾಮಾರ ಮುಂದೆ ನಿಲ್ಲಲು ಸಜ್ಜಾಗಿದ್ದಾರೆ. ಮೂಕನಾಗಿ ಹಳ್ಳಿಯಲ್ಲಿ ವಿಡಿಯೋಗ್ರಾಫರ್ ಆಗಿ ಇಬ್ಬರ ಹುಡುಗಿಯರಿಗೆ ನ್ಯಾಯ ಒದಗಿಸುತ್ತಾನಾ? ಎಂದು ನಾಯಕ ಡಾ.ಮಂಜುನಾಥ್ ಪಾತ್ರದ ಪರಿಚಯ ಮಾಡಿಕೊಂಡರು.

      ಸೃಷ್ಟಿ ಕೃಷ್ಣ   ಮತ್ತು ಧನ್ಯಶೆಟ್ಟಿ ನಾಯಕಿಯರಾಗಿ ಹೊಸ ಅನುಭವ. ಉಳಿದಂತೆ ರಜತ್, ಪೂರ್ಣಿಮಾ ನೀನಾಸಂ, ಮಹೇಶ್‌ಬಾಬು, ಅಮೃತ ರಾಜೇಶ್ ಮುಂತಾದವರು ಅಭಿನಯಿಸುತ್ತಿದ್ದಾರೆ. ನೃತ್ಯ ಸೂರಿ ಮಾಸ್ಟರ್ ಅವರದಾಗಿದೆ. news_1795694892_0_365.webp

ಒಟ್ಟಿನಲ್ಲಿ ಪ್ರೀತಿಯ ಸುತ್ತ ಲವ್ ಕಹಾನಿ ಹೇಗೆ ವರ್ಕೌಟ್ ಆಗುತ್ತದೆ, ಮಂಜುವಿನ ಹುಡುಕಾಟದಲ್ಲಿ ಪ್ರೀತಿ ಹೇಗೆ ಹುಟ್ಟುತ್ತದೆ, ಕೊನೆಯಲ್ಲಿ ಇಬ್ಬರು ಹೀರೋಯಿನ್ ಗಳಲ್ಲಿ ಯಾರಿಗೆ ಪ್ರೀತಿ ಸಿಗುತ್ತದೆ ಎಂಬುದೇ ಸಿನಿಮಾದ ಕಂಕ್ಲುಶನ್, ಸಿನಿಮಾದ ಎಲ್ಲಾ ವಿಚಾರಗಳನ್ನು ಈಗಲೇ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಚಿತ್ರಿಕರಣ ಮುಗಿದು ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಮೇಲೆ ಬಂದಾಗ ನೋಡಿ ಸಿನಿಮಾ ರಸಿಕರು ಒಂದೊಳ್ಳೆ ಸಿನಿಮಾದ ಅನುಭವ ಹೇಳಬೇಕಾಗುತ್ತದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
KTA ಅಧ್ಯಕ್ಷ ಗಣೇಶ್ ರಾವ್ ರಿಂದ ನ.,30ರಂದು ಸಮಾಜಮುಖಿ ಕಾರ್ಯಕ್ರಮಪ್ರೀತಿಯ ಸುತ್ತ ’ಆವರಿಸಿದೆ ಮಾನ್ಸೂನ್ ಸೀಸನ್ಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಕರ್ನಾಟಕದಲ್ಲಿ ಟೊಯೋಟಾ ವಿಸ್ತರಣೆಗೆ ಸಂಪೂರ್ಣ ಬೆಂಬಲ - ಸಿಎಂ ಶಿವಕುಮಾರ್ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪಬೆಂಗಳೂರು ಜಾತ್ರೆಯಲ್ಲಿ ಸ್ಥಳೀಯ ಪ್ರತಿಭೆಗಳು ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆ : ಆಯುಕ್ತ ಕೆ. ಎನ್. ರಮೇಶ್ಕರವೇ ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಮುಖಾಮುಖಿಅರಣ್ಯಭೂಮಿ ತೆರವು ನೆಪದಲ್ಲಿ ರೈತರಿಗೆ ಕಿರುಕುಳ; ಕೇಂದ್ರದ ಬಳಿಗೆ ಕೊಡಗು ನಿಯೋಗಸಾಹಿತ್ಯ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಲಿ, ವಿಭಜಿಸುವ ಸಾಧನವಾಗದಿರಲಿದಕ್ಷಿಣ ಕೊರಿಯಾ ಕೈಗಾರಿಕಾ ಟೌನ್ ಶಿಪ್ ಕುರಿತು ಕೌನ್ಸಲ್ ಜನರಲ್ ಜತೆ ಚರ್ಚೆ: ಎಂ ಬಿ ಪಾಟೀಲ