LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಲ್ಲರಿಗೂ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆ

ಬೆಂಗಳೂರು : ಖಾಸಗಿ ವಾಹಿನಿಯ ಮುಖ್ಯಸ್ಥ ತಮ್ಮ ಬಗ್ಗೆ ನಡೆಸುತ್ತಿರುವ ಕಪೋಲ ಕಲ್ಪಿತ ಸುಳ್ಳು ಪ್ರಚಾರದ ವಿರುದ್ಧ ಜೆಡಿಎಸ್ ಪಕ್ಷದ ನಾಯಕಿ ಹಾಗೂ ಮಾಜಿ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿ ದನಿಯೆತ್ತಿದ್ದಾರೆ. 

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಪವಿತ್ರ ನವರಾತ್ರಿಯ ದಿವ್ಯ ದಿನಗಳಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರು ನನ್ನ ವಿರುದ್ಧ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾದದ್ದು, ಸಂಪೂರ್ಣ ಕಟ್ಟುಕಥೆ ಮತ್ತು ದುರುದ್ದೇಶಪೂರಿತ ಸೃಷ್ಟಿ ಎಂದು ತಿಳಿಸಿದ್ದಾರೆ.

ಸುದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿರುವ ನನ್ನ ಕಳಂಕರಹಿತ ಚಾರಿತ್ರ್ಯಕ್ಕೆ ಧಕ್ಕೆ ತರಲು ಧರ್ಮ ಮತ್ತು ಸತ್ಯದ ಹಬ್ಬವಾದ ನವರಾತ್ರಿಯ ಸಂದರ್ಭದಲ್ಲೇ ಇಂತಹ ತೀರಾ ಕೀಳುಮಟ್ಟದ, ದುರುದ್ದೇಶ ಪ್ರೇರಿತ ನಿಂದನೆಗಿಳಿದಿರುವುದಕ್ಕೆ ನನ್ನ ತೀವ್ರ ಧಿಕ್ಕಾರವಿದೆ. ಸತ್ಯವನ್ನು ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಈ ರೀತಿಯ ಚಾರಿತ್ರ್ಯ ವಧೆ ಹಾಗೂ ಕಲ್ಪಿತ ಸಂಚಿನ ಹಿಂದೆ ಇರುವ ಸೂತ್ರಧಾರರಿಗೂ ಮತ್ತು ಅದನ್ನು ಕಾರ್ಯರೂಪಕ್ಕೆ ತಂದವರಿಗೂ ಆ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆ. ಈ ಅಧರ್ಮಕ್ಕೆ ತಾಯಿ ದುರ್ಗೆಯ ದಂಡನೆಯೇ ಅಂತಿಮ ಉತ್ತರ ಎಂಬುದಾಗಿ ಅನಿತಾ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ. 

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವ್ಯಾಪಾರಸ್ಥರು ಹಬ್ಬದ ಕಸ ಎಲ್ಲೆಂದರಲ್ಲಿ ಬಿಸಾಕಬೇಡಿ: ಜಗದೀಶ್ ಮನವಿ ಘನತ್ಯಾಜ್ಯ ನಿರ್ವಹಣೆ, 2ನೇ ಫೋನ್-ಇನ್ ಕಾರ್ಯಕ್ರಮದಲ್ಲಿ 10 ಅಹವಾಲುಗಳ ಸ್ವೀಕಾರಧರ್ಮ, ಸಂಸ್ಕೃತಿ ಉಳಿಸುವಲ್ಲಿ ಮಠಗಳ ಕೊಡುಗೆ ಅಪಾರ: ಸಚಿವ ವಿಜಯಾನಂದ ಕಾಶಪ್ಪನವರರೇಷ್ಮೆ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ದಸರಾ ಪೂಜೆಎಲ್ಲರಿಗೂ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆವಿಶ್ವ ಆಘಾತ ದಿನ: ಜೀವ ಉಳಿಸುವ "ಪ್ಲಾಟಿನಂ 10 ನಿಮಿಷ"ಗಳಿಗಾಗಿ ಪ್ರಥಮ ಸ್ಪಂದಕರಿಗೆ ತರಬೇತಿ ನೀಡಿದ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರಕ್ಕೆ ದಶಮಾನೋತ್ಸವಕ್ಕೆ ಕೃಷ್ಣಲೀಲಾಮೃತತಲೈವಾ ಅಬ್ಬರ! ಕಾಸಾಗ್ರ್ಯಾಂಡ್‌ನಿಂದ 3,500+ ಉದ್ಯೋಗಿಗಳಿಗೆ ವಿವಿಧ ನಗರಗಳಲ್ಲಿ ಜೈಲರ್ 2 ಫಸ್ಟ್ ಡೇ ಫಸ್ಟ್ ಶೋಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆಸಚಿವ ಮಧು ಬಂಗಾರಪ್ಪರನ್ನು ಭೇಟಿಯಾದ ನಟ ಆರ್. ದೇವರಾಜ್ ಕುಟುಂಭ