ಬೆಂಗಳೂರು : ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರ (ರಿ). ಸಂಸ್ಥೆಗೆ 10 ವರ್ಷ ಯಶಸ್ವಿಯಾಗಿ ಸಂದ ಹಿನ್ನಲೆ ದಶಮಾನೋತ್ಸವ ಸಂಭ್ರಮವನ್ನು ಮಸ್ಥೆಯವರು, ನೃತ್ಯಗಾರರು ವಿಶೇಷವಾಗಿ ಆಚರಣೆ ಮಾಡಲಾಯಿತು. 
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೂರಾರು ವಿದ್ಯಾರ್ಥಿಗಳು ವೇದಿಕೆ ಮೇಲೆ ಸುಮಾರು 2.5 ಗಂಟೆಗಳ ಕಾಲ ಕೃಷ್ಣಲೀಲಾಮೃತ ಕಥೆಯನ್ನು ನೃತ್ಯದ ಮೂಲಕ ಚಿಣ್ಣರಿಂದ ವಯಸ್ಕರು ಅದ್ಬುತವಾಗಿ ಅಭಿನಯಿಸಿದರು.
ಗುರು ವಿದುಷಿ ಸ್ಮಿತಾ ಪ್ರಕಾಶ್ ಅವರ ಗರಡಿಯಲ್ಲಿ ಬೆಳೆದ ಸುಮಾರು 100ಕ್ಕಿಂತ ಹೆಚ್ಚು ಕಲಾವಿದರು ಕಳೆದ 7 ತಿಂಗಳಿಂದ ಕಲಾವಿದರು ತರಬೇರಿಯನ್ನು ಸಂಸ್ಥೆಯಲ್ಲಿ ಪಡೆದು, ವಿಶೇಷವಾಗಿ ಮಹಾಭಾರತದಲ್ಲಿ ಬರುವ ಕೃಷ್ಣನ ವಿವಿಧ ಪಾತ್ರಗಳನ್ನು ವೇದಿಕೆ ಮೇಲೆ ನೇರದೃಶ್ಯಾವಳಿಗಳ ಮೂಲಕ ಅಭಿವ್ಯಕ್ತಪಡಿಸಿದರು. ಪ್ರೇಕ್ಷಕರೆಲ್ಲರೂ ಮೂಕ ವಿಸ್ಮಿತರಾದರು. ಗುರು ಸ್ಮಿತಾ ಅವರಿಗೆ ಪತಿ ಪ್ರಕಾಶ್ ಅವರು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಆಗಮಿಸಿ ನೃತ್ಯ ವೈಭವವನ್ನು ಕಣ್ತುಂಬಿಕೊಂಡರು.
ಕಾರ್ಯಕ್ರಮಕ್ಕೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಚಿಕ್ಕವರಾಗಿದ್ದಾಗಲೇ ಮಕ್ಕಳಿಗೆ ನೃತ್ಯದ ತರಬೇತಿ ಕೊಡಿಸಿದರೆ ಕಲೆ ಜೊತೆಗೆ ಅವರ ವಿಧ್ಯಾಭ್ಯಾಸ, ಬುದ್ದಿಮಟ್ಟ ಪಸರಿಸುತ್ತದೆ. ಒಂದು ಆರಂಗಿತರಂ ಮಾಡಬೇಕಾದರೆ ಸುಮಾರು 10 ವರ್ಷಗಳ ಶ್ರಮ ಇರುತ್ತದೆ. ಆಗ ಮಾತ್ರ ನುರಿತ ಕಲಾವಿದರಾಗಲು ಸಾಧ್ಯ ಎಂದರು. 
ನಮ್ಮ ಬಡಾವಣೆಯಲ್ಲಿ ಗುರು ವಿದುಷಿ ಸ್ಮಿತಾ ಪ್ರಕಾಶ್ ಅವರು ವಾಸವಾಗಿದ್ದು, ಅವರು ಮಕ್ಕಳಿಗೆ ನೃತ್ಯ ಹೇಳಿಕೊಡುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚು ಜನರು ಆಗಮಿಸಿ ಕಲಾವಿದರಿಗೆ ಬೆಂಬಲ ವ್ಯಕ್ತಪಡಿಸಿದಾಗ ಅವರಿಗೆ ಕೊಡುವ ದೊಡ್ಡ ಬಹುಮಾನವಾಗಿರುತ್ತದೆ. ನಾನು ಬಹುತೇಕವಾಗಿ ಕಲಾಕ್ಷೇತ್ರಕ್ಕೆ ಬಂದಾಗಲೆಲ್ಲ ಸಭಾಂಗಣದಲ್ಲಿ ಜನರ ಮಖ್ಯೆ ವಿರಳವಾಗಿರುತ್ತದೆ, ಆದರೆ ನಿಮ್ಮ ಕಾರ್ಯಕ್ರಮದಲ್ಲಿ House full ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ನೃತ್ಯ ಸಂಸ್ಥೆ ಹೀಗೆ ದೊಡ್ಡ ಮಟ್ಟದಲ್ಲಿ ಬೆಳೆದು ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಶುಭಹಾರೈಸಿದರು.
ಇನ್ನು ಇದೇ ವೇಳೆ ಸಂಗೀತ ನೃತ್ಯದಲ್ಲಿ ತಮ್ಮದೇ ಆದ ಸಾಧನೆ ಮಾಡಿದ
ಡಾ.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ನೃತ್ಯ ಕಲಾ ವಿಶ್ವಿವಿದ್ಯಾಲಯದ ಮಾಜಿ ಕುಲಪತಿ
ಪ್ರೊ.ಡಾ.ನಾಗೇಶ್ ವಿ.ಬೆಟ್ಟಕೋಟೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ
ನೃತ್ಯ ಸರಸ್ವತಿ ಶುಭಾ ಧನಂಜಯ್, ನಟರಾಜ ನೃತ್ಯ ಶಾಲೆಯ ಕಲಾ ನಿರ್ದೇಶಕಿ
ಗುರು ವಿದುಷಿ ಸೀಮಾ ಪ್ರದೀಪ್ ಭಾಗವತ್ ಶ್ರೀ ಲಲಿತಕಲಾನಿಕೇತನದ ನೃತ್ಯ ನಿರ್ದೇಶಕರಾದ
ಕಲಾಯೋಗಿ ವಿದುಷಿ ರೇಖಾ ಜಗದೀಶ್, ಕಾರ್ಯಕ್ರಮದ ನಿರೂಪಣೆಯನ್ನು ವಿಕ್ಟೋರಿಯ ಆಸ್ಪತ್ರೆ ಮನಶಾಸ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ
ಡಾ.ವಾಣಿಪ್ರಭಾ ಜಿ.ವಿ ಅವರು ಭಾಗವಹಿಸಿದರು. 