LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆ

ಬೆಂಗಳೂರು: ವಿಜಯಪುರ ಜಿಲ್ಲೆ, ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಮದಾಪುರ ಕೆರೆಯಲ್ಲಿ ನೀರು ತುಂಬಿದಾಗ ಮುಳುಗಡೆ ಆಗುವ 178 ಎಕರೆ ಜಮೀನನ್ನು ರೈತರ ಕೋರಿಕೆಯ ಮೇರೆಗೆ ಭೂಸ್ವಾಧೀನಕ್ಕೆ ಸಕಾರಾತ್ಮಕ ತೀರ್ಮಾನವಾಗಿದ್ದು ಈ ವಿಷಯವನ್ನು ಸಂಪುಟದ ಮುಂದೆ ತರಲು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.news_1784288370_1_280.webp

ಈ ಸಂಬಂಧವಾಗಿ ಗುರುವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮತ್ತು ಎಂ ಬಿ ಪಾಟೀಲ ಇಬ್ಬರೂ ವಿಧಾನಸೌಧದಲ್ಲಿ ಸಣ್ಣ ನೀರಾವರಿ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಮುಳುಗಡೆ ಪ್ರದೇಶದ ರೈತರಿಗೆ ಆಗುತ್ತಿರುವ ಅನಾನುಕೂಲ ಮತ್ತು ನಷ್ಟ ತಪ್ಪಿಸಲು ಸ್ವಾಧೀನದ ಅಗತ್ಯ ಇದ್ದು, ಆದಷ್ಟು ಬೇಗ ಈ ಕುರಿತು ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಕ್ಷೇತ್ರದ ಶಾಸಕರೂ ಆದ ಸಚಿವ ಪಾಟೀಲ ಅವರು ಮಾತನಾಡಿ, '16ನೇ ಶತಮಾನದಲ್ಲಿ ಆದಿಲ್ ಶಾಹಿಗಳು ಕಟ್ಟಿಸಿದ ಮಮದಾಪೂರ ಕೆರೆ 1,200 ಎಕರೆ ವಿಶಾಲವಾಗಿದ್ದು, 15 ಹಳ್ಳಿಗಳಿಗೆ ಆಸರೆಯಾಗಿದೆ. ಕೃಷ್ಷಾ ಮೇಲ್ದಂಡೆ ಯೋಜನೆಯಿಂದ ಇದಕ್ಕೆ ನೀರು ತುಂಬಿಸಲಾಗುತ್ತದೆ. ಹೀಗಾದಾಗ 42 ರೈತರಿಗೆ ಸೇರಿರುವ 178 ಎಕರೆ ಮುಳುಗಡೆಯಾಗಿ ಅಲ್ಲಿ ಏನನ್ನೂ ಬೆಳೆಯಲು ಆಗುತ್ತಿಲ್ಲ ಎಂದಿದ್ದಾರೆ.

ಹೀಗಾಗಿ ರೈತರು ಇಷ್ಟು ಜಮೀನನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೋರುತ್ತಿದ್ದರು. ಇದಕ್ಕೆ 42 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಅದಕ್ಕೆ ಹಣ ಬಿಡುಗಡೆ ಮಾಡುವಂತೆ ಕೋರುವ ಉದ್ದೇಶದಿಂದ ಈ ಸಭೆ ನಡೆಸಲಾಯಿತು.news_1784288370_2_143.webp

ಜಲಸಂಪನ್ಮೂಲ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ವ್ಯವಸ್ಥಾಪಕ ಬಿ ಎಂ ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಬಿ.ಕೆ.ಪವಿತ್ರಾ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಷ್ಠಾನಕ್ಕೆ ಬಂದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆಬೆಂಗಳೂರಿನ ಹೆಚ್ಎಂಟಿ ಭೂಮಿ ಕೊಳ್ಳೆ ಹೊಡೆದ ಮಹಾಪ್ರಭಾವಿ ಯಾರು? HDK ಪ್ರಶ್ನೆಕನ್ನಡಿಗರನ್ನು ಮತ್ತಷ್ಟು ಕುಡುಕರನ್ನಾಗಿಸುತ್ತೀರಾ?ಎಎಪಿ ಪ್ರಶ್ನೆಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!ಕೃತಕ ಬುದ್ಧಿಮತ್ತೆಯು (ಎಐ) ಆ ಗುರಿಯನ್ನೇ ತಪ್ಪನ್ನಾಗಿ ಮಾಡಿದೆ : ಡಾ. ಶ್ರೀಧರ್ ಜಿಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ :ಲೋಖಂಡೆ ಸ್ನೇಹಲ್ ಸುಧಾಕರ್ಭೂಮಿ ಲೂಟಿಗೆ ಮತ್ತೆ ನೋಟಿಫಿಕೇಶನ್ ಹೊರಟಿಸಿದ್ದು ಪಾಶವೀಕೃತ ಎಂದ ಕೇಂದ್ರ ಸಚಿವರುಬರದ ಆಕ್ರಂದನ: ರೈತರ ನೋವನ್ನು ಆಲಿಸಿದ ಜೆಡಿಎಸ್ ಅಧ್ಯಯನ ತಂಡ