LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿವಮೊಗ್ಗ ಜಂಬುಸವಾರಿಯಲ್ಲಿ ದಿಕ್ಕೆಟ್ಟು ಓಡಿದ ಸೋಮಣ್ಣ ಆನೆ

ಶಿವಮೊಗ್ಗ: ಮಲೆನಾಡ ಭಾಗದ ಶಿವಮೊಗ್ಗದಲ್ಲಿ ದಸರಾ ಹಬ್ಬ ಕಳೆ ಕಟ್ಟಿದೆ, ವಿಜಯದಶಮಿಯ ಜಂಬೂಸವಾರಿಯಲ್ಲಿ  ಸಾಗರ ಆನೆ ಬದಲಿಗೆ ಸೋಮಣ್ಣ ಆನೆ ದಿಕೆಟ್ಟು ಅಂಬಾರಿಯನ್ನು ಹೊತ್ತುಕೊಂಡು ಹೋಗಿರುವ ದೃಶ್ಯ ವೈರಲಾಗಿದೆ.news_1792585744_2_604.webp

ಶಿವಮೊಗ್ಗದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ವಿಜಯ ದಶಮಿಯ ದಿನದಂದು ಆನೆಯ ಮೇಲೆ ಅಂಬಾರಿ ಓರುವ ಪದ್ಧತಿ ರುಡಿಯಲ್ಲಿತ್ತು ಈ ಬಾರಿಯೂ ಸಹ ಅಂಬಾರಿ ಓರುವ ಕೆಲಸವನ್ನು ಸಾಗರ್  ಆನೆಗೆ ಜವಾಬ್ದಾರಿ ವಹಿಸಲಾಗಿತ್ತು, ಕಾರಣಾಂತರಗಳಿಂದ ಸೋಮಣ್ಣ ಆನೆಗೆ ಬದಲಿಸಲಾಗಿತ್ತು, ಕಳೆದ ಎರಡು ದಿನಗಳ ಹಿಂದೆ ಸೋಮಣ್ಣ ಆನೆಗೆ  ಅಂಬಾರಿ ಓರುವ ಜವಾಬ್ದಾರಿಯನ್ನು ನೀಡಲಾಗಿದ್ದು,  ಅದಕ್ಕೆ ಅದಕ್ಕೆ ಶಿವಮೊಗ್ಗದ ಸಕ್ರಬಹಲು ಆನೆ ಶಿಬಿರದಲ್ಲಿ ಸಾಕಷ್ಟು ತರಬೇತಿನು ಸಹ ನೀಡಲಾಗಿತ್ತು , ಆದರೆ ಇಂದು ವಿಜಯ ದಶಮಿಯ ದಿನದಂದು ಅಂಬಾರಿ ಹೊತ್ತಿಕೊಂಡು ಹೋಗು ವೇಳೆ ಸೋಮಣ್ಣ ಆನೆಗೆ ಏನಾಯಿತು ಗೊತ್ತಿಲ್ಲ ಅಂಬಾರಿ ಹೊತ್ತಿಕೊಂಡು ಕೇವಲ 10 ನಿಮಿಷದಲ್ಲಿ ಡಿಕ್ಕೆಟ್ಟು ರಸ್ತೆಯಲ್ಲಿ ಓಡಿಹೋಗಿ ಅವಾಂತರ ಸೃಷ್ಟಿ ಮಾಡಿದೆ.

ಆನೆಯನ್ನು ನಿಯಂತ್ರಿಸಲು ಮಾವುತರು ಹರಸಾಹಸಪಟ್ಟಿದ್ದಾದರೂ ಸಹ ಅಂಬಾರಿ ಕೆಳಗಡೆ ಬಿದ್ದು ಅದನ್ನು ಎಳೆದುಕೊಂಡು ಹೋಗಿರುವ ದೃಶ್ಯವು ವೈರಲಾಗಿದೆ. ಸೋಮಣ್ಣ ಆನೆಯ ಪುಂಡಾಟಕ್ಕೆ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳು, ಕೆಲ ಮನೆಗಳ ಹಂಚುಗಳು ಜಖಂಗೊಂಡಿವೆ..

 ಸಾಗರ ಆನೆ ಬದಲಿಗೆ ಸೋಮಣ್ಞ ಆನೆಗೆ  ತಂದಿದ್ದು ಏಕೆ ಎನ್ನುವ ಬಗ್ಗೆ ಇನ್ನೂ ಸಹ ಮಾಹಿತಿ ತಿಳಿದು ಬಂದಿಲ್ಲ, ಸಾಗರ ಆನೆಗೆ ಜಂಬೂಸವಾರಿಯ ವೇಳೆ ಏನಾಗಿದೆ ಎಂಬುದರ ಬಗ್ಗೆ ಸಹ ಯಾರಿಗೂ ತಿಳಿದು ಬಂದಿಲ್ಲ ಇದಕ್ಕಾಗಿಯೇ ಅರಣ್ಯ ಇಲಾಖೆಯ ಅಧಿಕಾರಿಗಳನ್ನು , ವೈದ್ಯರು ಪರಿಶೀಲಿಸುತ್ತಿದ್ದಾರೆ.

ಕೊಂಚ ಯಾಮಾರಿದರೂ ದೊಡ್ಡ ಅನಾಹುತ: news_1792585744_1_259.webp

ಇನ್ನು ಸೋಮಣ್ಣ ಆನೆ ರೊಚ್ಚಿಗೆದ್ದು  ರೌದ್ರಾವತಾರ ತಾಳಿದರೆ ಅಂಬಾರಿಯ ಹೊತ್ತುಕೊಂಡ ಸಮಯದಲ್ಲಿ ಅದೆಷ್ಟು ಅನಾಹುತಗಳು ನಡೆಯುತ್ತಿದ್ದವು ದೇವರೇ ಬಲ್ಲ, ಸೋಮಣ್ಣ ಆನೆಯನ್ನು ನಿಯಂತ್ರಿಸಲು ಮತ್ತೆರಡು ಆನೆಗಳನ್ನು ಬಳಸಿಕೊಂಡು ಹಿಂಬಾಲಿಸಿ ಸೋಮಣ್ಣ ಆನೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ. ಇಲ್ಲದಿದ್ದರೆ ಜಂಬೂಸವಾರಿಯಲ್ಲಿ ಮತ್ತಷ್ಟು ಅನಾಹುತಗಳ ಸಂಭವಿಸುವ ಎಲ್ಲಾ ಲಕ್ಷಣಗಳು ಇದ್ದವು.

ಜಂಬೂಸವಾರಿ ನಡೆಯುವ ಸ್ಥಳದಲ್ಲಿ ಸಾಗರ ಸೋಮಣ್ಣ ಆನೆಯ ಪುಂಡಾಟಕ್ಕೆ ಕೆಲಕಾಲ  ಸಾರ್ವಜನಿಕರು ರೋಸಿಹೋಗಿ ಬೆಚ್ಚಿ ಬಿದಿದರೂ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿವಮೊಗ್ಗ ಜಂಬುಸವಾರಿಯಲ್ಲಿ ದಿಕ್ಕೆಟ್ಟು ಓಡಿದ ಸೋಮಣ್ಣ ಆನೆವ್ಯಾಪಾರಸ್ಥರು ಹಬ್ಬದ ಕಸ ಎಲ್ಲೆಂದರಲ್ಲಿ ಬಿಸಾಕಬೇಡಿ: ಜಗದೀಶ್ ಮನವಿ ಘನತ್ಯಾಜ್ಯ ನಿರ್ವಹಣೆ, 2ನೇ ಫೋನ್-ಇನ್ ಕಾರ್ಯಕ್ರಮದಲ್ಲಿ 10 ಅಹವಾಲುಗಳ ಸ್ವೀಕಾರಧರ್ಮ, ಸಂಸ್ಕೃತಿ ಉಳಿಸುವಲ್ಲಿ ಮಠಗಳ ಕೊಡುಗೆ ಅಪಾರ: ಸಚಿವ ವಿಜಯಾನಂದ ಕಾಶಪ್ಪನವರರೇಷ್ಮೆ ಕೃಷಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ದಸರಾ ಪೂಜೆಎಲ್ಲರಿಗೂ ಜಗನ್ಮಾತೆ ದುರ್ಗಾದೇವಿಯೇ ತಕ್ಕ ಶಾಸ್ತಿ ಮಾಡಲಿದ್ದಾಳೆವಿಶ್ವ ಆಘಾತ ದಿನ: ಜೀವ ಉಳಿಸುವ "ಪ್ಲಾಟಿನಂ 10 ನಿಮಿಷ"ಗಳಿಗಾಗಿ ಪ್ರಥಮ ಸ್ಪಂದಕರಿಗೆ ತರಬೇತಿ ನೀಡಿದ ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ಶ್ರೀ ಮಾರಿಕಾಂಬಾ ನೃತ್ಯ ಕಲಾಕೇಂದ್ರಕ್ಕೆ ದಶಮಾನೋತ್ಸವಕ್ಕೆ ಕೃಷ್ಣಲೀಲಾಮೃತತಲೈವಾ ಅಬ್ಬರ! ಕಾಸಾಗ್ರ್ಯಾಂಡ್‌ನಿಂದ 3,500+ ಉದ್ಯೋಗಿಗಳಿಗೆ ವಿವಿಧ ನಗರಗಳಲ್ಲಿ ಜೈಲರ್ 2 ಫಸ್ಟ್ ಡೇ ಫಸ್ಟ್ ಶೋಮಧು ಬಂಗಾರಪ್ಪ ಅವರ ಪ್ರಯತ್ನಕ್ಕೆ ಫಲ: ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆ