LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BKFನಿಂದ ಡಾ.ಎನ್ ರಾಜಂಗೆ ಪಂ.ಮ. ಮನ್ಸೂರ್ ಪ್ರಶಸ್ತಿ ಪ್ರಧಾನ

ಬೆಂಗಳೂರು:  ಖ್ಯಾತ ವಯೋಲೆನ್ ವಾದಕಿ ವಿದುಷಿ ಡಾಕ್ಟರ್ ಎನ್ ರಾಜಂ ಅವರಿಗೆ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಪ್ರಶಸ್ತಿಯನ್ನು ಬೆಂಗಳೂರು ಕಿಡ್ನಿ ಫೌಂಡೇಶನ್ ವತಿಯಿಂದ ನೀಡಿ ಗೌರವಿಸಲಾಯಿತು.

ಬೆಂಗಳೂರಿನ ಗಾಯನ ಸಮಾಜದಲ್ಲಿ ಬಿಕೆಫ್ ಆಯೋಜಿಸಿದ್ದ ಎರಡು ದಿನಗಳ 20ನೇ ದ್ವನಿ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಹಿಂದುಸ್ತಾನಿ ಸಂಗೀತೋತ್ಸವದಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಡಾಕ್ಟರ್ ಎನ್ ರಾಜಂ ಅವರಿಗೆ ಪ್ರಶಸ್ತಿ ಪ್ರಧಾನವನ್ನು ಮಾಡಿದರು‌.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದುಷಿ ಎನ್ ರಾಜಂ ನನಗೆ ಮನ್ಸೂರ್ ಪ್ರಶಸ್ತಿ ನೀಡಿರುವುದು ಸಂತಸ ತನಿದೆ , ಇದಕ್ಕೆ ನಾನು ಅರ್ಹಳಲ್ಲ ಎಂದು ಭಾವಿಸಿದ್ದೇನೆ, ಮೂರನೇ ವಯಸ್ಸಿನಲ್ಲಿ ಸಂಗೀತ ಕಲಿಕೆ ಆರಂಭಿಸಿದ ನಾನು 83 ವರ್ಷಗಳ ನಿರಂತರ ಸಂಗೀತ ಸೇವೆ ಮಾಡಿದ್ದೇನೆ. ಸಂಗೀತ ಎಂಬುದು ಒಂದು ಬೃಹತ್ ಸಾಗರ ಇದ್ದಂತೆ ನಿರಂತರವಾಗಿ ಸಂಗೀತ ಅಭ್ಯಾಸದ ನಂತರ ನಾನು ಇನ್ನೂ ವಿದ್ಯಾರ್ಥಿ ಎಂದೇ ಭಾವಿಸಿದ್ದೇನೆ ಎಂದು ಹೇಳಿದರು. ಶ್ರೇಷ್ಠ , ಹೆಸರಾಂತ ಸಂಗೀತ ದಿಗ್ಗಜರ ಹೆಸರಿನಲ್ಲಿ ಪ್ರಶಸ್ತಿ ನೀಡುವುದರಿಂದ ಪ್ರಶಸ್ತಿ ಪಡೆದವರಿಗೆ ಮತ್ತಷ್ಟು ಕೆಲಸ ಕಾರ್ಯಗಳು ಹೆಚ್ಚಾಗುತ್ತದೆ ಮತ್ತು ಜವಾಬ್ದಾರಿ ಹೆಚ್ಚಾಗುತ್ತದೆ ಎಂದರು.

ಸುಧಾಕರ್ ರಾವ್ ಮಾತನಾಡಿ ಹಿಂದುಸ್ತಾನಿ ಸಂಗೀತ ದಿಗ್ಗಜ ಪಂಡಿತ್ ಮಲ್ಲಿಕಾರ್ಜುನ್ ಮನ್ಸೂರ್ ಅವರು ಮೂತ್ರಪಿಂಡ ಸಮಸ್ಯೆಯಿಂದ ಬೆಂಗಳೂರು ಕಿಡ್ನಿ ಫೌಂಡೇಶನ್ ಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು ಅಲ್ಲಿ ದೊರೆತ ಚಿಕಿತ್ಸೆ ಹಾಗೂ ಅಲ್ಲಿನ ಸಾಮಾಜಿಕ ಸೇವೆಯಿಂದ ಪ್ರೇರಿತರಾದ ಮಲ್ಲಿಕಾರ್ಜುನ್ ಅವರು ಚೇತರಿಸಿಕೊಂಡ ಬಳಿಕ ಬಿಕೆಎಫ್ ಸೇವ ಕಾರ್ಯವನ್ನು ಬೆಂಬಲಿಸಲು ಸಂಗೀತ ಕಚೇರಿ ನಡೆಸಿ ಅದರಿಂದ ಗಳಿಸಿದ ಹಣವನ್ನು ಬಿಕೆಫ್ ಗೆ ದಾನ ಮಾಡಿದರು. ಅವರ ನಿಧನದ ನಂತರ ಪ್ರತಿವರ್ಷ ಸೆಪ್ಟೆಂಬರ್ ನಲ್ಲಿ ಮನ್ಸೂರ್ ಅವರ ಸ್ಮರಣಾರ್ಥ ಧ್ವನಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ, ಇದರಿಂದ ಸಂಗ್ರಹವಾದ ಹಣವನ್ನು ರೋಗಿಗಳ ಆರೈಕೆಗೆ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಂಗೀತದಲ್ಲಿ ಮನರಂಜಿಸಿದ ವಿದುಷಿಗಳು

ಇನ್ನು ಸಂಗೀತ ಉತ್ಸವದಲ್ಲಿ ವಿದುಷಿ ಆರತಿ ಅಂಕಲಿಕರ್ ಮತ್ತು ವಿದುಷಿ ಮಂಜುಶ ಪಾಟೀಲ್ ಅವರು ಜುಗಲ್ ಬಂದಿ ಸಾಕಷ್ಟು ಮನೋಹರವಾಗಿದ್ದು ನೆರೆದಿದ್ದ ಪ್ರೇಕ್ಷಕರಿಗೆ ಮಂತ್ರ ಮುಗ್ಧರನ್ನಾಗಿಸಿದೆ. ತಬಲದಲ್ಲಿ ಪಂಡಿತು ರವೀಂದ್ರ ಯಾವಾಗಲು, ಹಾರ್ಮೋನಿಯಂನಲ್ಲಿ ಪಂಡಿತ್ ವ್ಯಾಸ ಮೂರ್ತಿ ಕಟ್ಟಿ, ಸಾತ್ ನೀಡಿದರು. ಬಳಿಕ ವಿದುಷಿ ಡಾಕ್ಟರ ಎನ್ ರಾಜಂ ವಿದುಷಿ ಸಂಗೀತ ಶಂಕರ್ ರಾಗಿಣಿ ಮತ್ತು ನಂದಿನಿ ಶಂಕರ್ ಪಂಡಿತ್ ಸುಬ್ಬು ಮಹಾರಾಜ್, ಪಂಡಿತ್ ಅಭಿಷೇಕ್ ಮಿಶ್ರಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಬಹಳ ವಿಶೇಯವಾಗಿತ್ತು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೀರಾ ಕುರಿತು ಶ್ರೀಮತಿ ವಿಶಾಖ ಹರಿ ಅವರ ಸಂಗೀತ ಪ್ರವಚನ ಹರಿಕಥೆ, ಜುಗಲ್ಬಂದಿ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಕೊಳಲಲ್ಲಿ, ಪಂಡಿತ್ ಜಯತೀರ್ಥ ಮತ್ತು ಪಂಡಿತ್ ರವೀಂದ್ರ ನಕೋಡ ತಬಲದಲ್ಲಿ ಜನಮನ ರಂಜಿಸಿದರು.

ಬಿಕೆಎಫ್ ನ ವಿಶೇಷತೆಗಳು

ಬೆಂಗಳೂರು ಕಿಡ್ನಿ ಫೌಂಡೇಶನ್ ನಲ್ಲಿ 80 ಡಯಾಲಿಸಿಸ್ ಯಂತ್ರಗಳನ್ನು ಹಾಗೂ ಹೊರಭಾಗದಲ್ಲಿ 125 ಯಂತ್ರಗಳನ್ನು ಅಳವಡಿಸಲಾಗಿದೆ, ನಿತ್ಯ ಸುಮಾರು 155 ಮಂದಿಗೆ ಸೇವೆ ಒದಗಿಸುತ್ತಿದೆ ಸಾಮಾನ್ಯರಿಗೆ ಶೇಕಡ 50 ಹಾಗೂ ಕಡು ಬಡವರಿಗೆ ಉಚಿತವಾಗಿ ಸೇವೆ ನೀಡುತ್ತಿದೆ.

ಕರ್ನಾಟಕ ರಾಜ್ಯದಲ್ಲಿ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡ ಕಾಯಿಲೆಗಳ ಚಿಕಿತ್ಸೆಯಲ್ಲಿ ಬೆಂಗಳೂರು ಕಿಡ್ನಿ ಫೌಂಡೇಶನ್ ಮುಂಚೂಣಿಯಲ್ಲಿದೆ. ಈ ಟ್ರಸ್ಟ್ 1979ರಲ್ಲಿ ಸ್ಥಾಪನೆಯಾಯಿತು ಮತ್ತು ಆರ್ಥಿಕ ಕೆಳಸ್ತರದಲ್ಲಿರುವ ರೋಗಿಗಳಿಗೆ ಕೈಗೆಟಕುವ ವೆಚ್ಚದಲ್ಲಿ ಗುಣಮಟ್ಟದ ಮೂತ್ರಪಿಂಡ ಆರೋಗ್ಯ ಸೇವೆಯನ್ನು ಒದಗಿಸುವ ನೋಡಲು ಕೇಂದ್ರವಾಗಿ ರೂಪ ಪಡೆದಿದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ