
ಸದಾ ನಾಡಿನ ಭಾಷೆ ನೆಲ ಜಲ ಹಾಗೂ ಸ್ವಾಭಿಮಾನದ ವಿಚಾರವಾಗಿ ನಮ್ಮ ಕರ್ನಾಟಕ ಸೇನೆ ಸದಾ ಮುಂದೆ ಇದ್ದು ಸಂಸ್ಥೆಯು ಸ್ಥಾಪನೆಯಾಗಿ ಮೂರು ವರ್ಷಗಳು ಕಳೆಯುತ್ತಿವೆ ಆದರೆ ಮೂರು ವರ್ಷದಲ್ಲಿ ನಾಡಿನ ವಿಚಾರವಾಗಿ ಸಾಕಷ್ಟು ಕೆಲಸ ಕಾರ್ಯಗಳನ್ನು ಅಭಿವೃದ್ಧಿ ಕೆಲಸಗಳನ್ನು ನಾಡಿನ ಶ್ರೇಯೋಭಿವೃದ್ಧಿಗಾಗಿ ಸಲ್ಲಿಸುವ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.
ಹೀಗಾಗಿ ಬಸವರಾಜ ಪಡುಕೋಟೆ ಅವರ ಸಮಾಜಮುಖಿ ಕೆಲಸ ಕಾರ್ಯಗಳನ್ನು ಒಪ್ಪಿಕೊಂಡು ಜಿಲ್ಲಾ ಅಧ್ಯಕ್ಷರುಗಳು ತಾಲೂಕ ಅಧ್ಯಕ್ಷರುಗಳು, ಅಭಿಮಾನಿಗಳು ಹಿತೈಷಿಗಳು ಬಂಧು ಬಳಗದವರು ಅನೇಕ ಕನ್ನಡ ಪರ ಸಂಘಟನೆಗಳ ಮುಖಂಡರುಗಳು ಅಧ್ಯಕ್ಷರುಗಳು ಈ ಒಂದು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಡುಕೋಟೆ ಅವರಿಗೆ ಶುಭಾಶಯಗಳನ್ನು ತಿಳಿಸಿದರು.
ಹುಟ್ಟು ಹಬ್ಬದಲ್ಲಿ ಡಿಎಸ್ ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥ ದಯಾನಂದ್ ಭಾಗಿ

ಇನ್ನೂ ಇದೆ ವೇಳೆ ಡಿಎಸ್ ಮ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥರಾದ ದಯಾನಂದವರು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವರಾಜ ಕೊಡಕೋಟೆ ಅವರಿಗೆ ಶುಭ ಹಾರೈಸಿದರು ನಂತರ ಮಾತನಾಡಿದವರು ಬಸವರಾಜ್ ಅವರು ನಿರಂತರವಾಗಿ ನಾಡಿನ ಬಗ್ಗೆ ಸಾಕಷ್ಟು ಕಾಳಜಿಗಳನ್ನು ಇಟ್ಟುಕೊಂಡು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ, ಬಸವರಾಜ ಅವರ ಹೋರಾಟದ ವೈಕರಿಗಳೇ ಬೇರೆ ನಾಡಿನಲ್ಲಿ ಸಾಕಷ್ಟು ಕನ್ನಡಪರ ಸಂಘಟನೆಗಳಿವೆ ಆದರೆ ಸಾಕಷ್ಟು ನಾಡಿನ ಬಗ್ಗೆ ಕೆಲಸ ಕಾರ್ಯಗಳನ್ನು ಹಾಗೂ ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಾವು ಇಬ್ಬರೂ ಸಹ ಸ್ನೇಹಿತರು, ಬಸವರಾಜ ಬಗ್ಗೆ ಸಾಕಷ್ಟು ಎಲ್ಲೆಡೆ ಒಳ್ಳೆಯ ಅಭಿಪ್ರಾಯವಿದೆ. ಬಸವರಾಜ ಅವರ ಜನಪರ ಕಾಳಜಿ ಇರುವ ವ್ಯಕ್ತಿಯಾಗಿದ್ದು ಅವರ ಹೋರಾಟಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಖಾಸಗಿ ಹೋಟೆಲ್ ಅಲ್ಲಿ ಹಿಂದೂ ಶುಕ್ರವಾರ ಬೆಳಿಗ್ಗೆ ಇಂದ ಸಂಜೆಯ ತನಕ ಅಭಿಮಾನಿಗಳು ಹಿತೈಷಿಗಳು ಕನ್ನಡಪರ ಹೋರಾಟಗಾರರು ಬಂಧು ಬಳಗದವರು ಸ್ನೇಹಿತರು ಮೆಚ್ಚಿನ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಂಡೋಪ ತಂಡವಾಗಿ ಆಗಮಿಸಿ ಪುಷ್ಪಗುಚ್ಛಗಳನ್ನು, ಉಡುಗೊರೆಯನ್ನು ನೀಡುವ ಮೂಲಕ ಅಭಿಮಾನವನ್ನು ಮೆರೆದರು.
ನಮ್ಮ ಕರ್ನಾಟಕ ಸೇನೆಗೆ ಸದಾ ಬೆಂಬಲ:

ಇನ್ನು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಎಂ ಬಸವರಾಜ ಪಡುಕೋಟೆ ಅವರ ಹುಟ್ಟುಹಬ್ಬಕ್ಕೆ ರಾಷ್ಟ್ರೀಯ ಕುಸ್ತಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ನಮ್ಮ ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿ ಅವರು ಪಡಕೋಟೆ ಅವರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿ ಪುಷ್ಪಗುಚ್ಛವನ್ನು ನೀಡುವ ಮೂಲಕ ಶುಭ ಹಾರೈಸಿದರು, ನಂತರ ಮಾತನಾಡಿದವರು ಸಂಘಟನೆಗಳು ಬೇರೆ ಬೇರೆ ಇದ್ದರೂ ಸಹ ನಾವೆಲ್ಲರೂ ಸಹ ಕನ್ನಡ ನಾಡಿನ ಭಾಷೆ ಜಲ ಭೂ ವಿಚಾರವಾಗಿ ನಾವೆಲ್ಲರೂ ಸಹ ಒಗ್ಗಟ್ಟಾಗಿ ನಿಲ್ಲಬೇಕು ಅದರಲ್ಲಿ ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ್ ಬಡಕೋಟೆ ಅವರ ನಾಡಿನ ಬಗ್ಗೆ ಇರುವ ಗೌರವ ಕಾಳಜಿ ಹೆಮ್ಮೆಪಡುವ ವಿಚಾರವಾಗಿದೆ ಹಲವು ವಿಚಾರಗಳಲ್ಲಿ ಸೇನೆಯು ಬಲಿಷ್ಠವಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುವ ಹಾಗೂ ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದುವ ವಿಚಾರವಾಗಿ ಸೇನೆಯು ಅವಿರತವಾಗಿ ಕೆಲಸ ಮಾಡುತ್ತಿದೆ ಅದಕ್ಕೆ ನಮ್ಮ ಸಂಘಟನೆಯಿಂದಲೂ ಸಹ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಬಸವರಾಜ್ ಅವರ ಕೆಲಸ ಕಾರ್ಯಗಳ ವೈಕರಿಗಳು ನನಗೆ ಬಹಳ ಇಷ್ಟವಾಗಿದ್ದು ಪ್ರತಿ ವರ್ಷವೂ ಸಹ ಇವರ ಹುಟ್ಟು ಹಬ್ಬದ ದಿನದಂದು ನಾನು ಯಾವುದೇ ಕೆಲಸ ಇದ್ದರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸುತ್ತೇನೆ ಎಂದರು.
ನಮ್ಮದು ರೋಲ್ ಕಾಲ್ ಮಾಡುವ ಸಂಘಟನೆ ಯಲ್ಲಾ:

ಇನ್ನು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಸವರಾಜ ಪಡ್ಕೋಟೆ ಅವರು ಮಾತನಾಡಿ, ನಮ್ಮ ಕರ್ನಾಟಕ ಸೇನೆ ಸ್ಥಾಪಿಸಿರುವ ಉದ್ದೇಶ ನಾಡಿನ ಭಾಷೆ ಜಲ ಸಂಸ್ಕೃತಿ ಭೂಮಿಯ ವಿಚಾರವಾಗಿ ಸದಾ ಕೆಚ್ಚೆದೆಯಾಗಿ ಹೋರಾಟಗಳನ್ನು ಮಾಡಿಕೊಂಡು ಯಾವುದೇ ಘಟನಾವಳಿಗೆ ಆಸ್ಪದವನ್ನು ನೀಡದೆ ಕಾನೂನಿನ ಅಡಿಯಲ್ಲಿ ಕೆಲಸ ಕಾರ್ಯಗಳನ್ನು ಸಂಘಟನೆ ಮಾಡಿಕೊಂಡು ಬರುತಿದೆ.
ನಮ್ಮ ಸಂಘಟನೆ ಯಾವುದೇ ಕಾರಣಕ್ಕೂ ರೋಲ್ ಕಾಲ್ ಸಂಘಟನೆ ಎಲ್ಲಾ ರೋಲ್ ಕಾಲ್ ಮಾಡುವ ಸಂಘಟನೆಗಳು ಉತ್ತುಂಗ ಮಟ್ಟಕ್ಕೆ ಜನರು ಗುರುತ್ಸೋ ಮಟ್ಟಕ್ಕೆ ಹೋಗುವುದಿಲ್ಲ ಹೀಗಾಗಿ ನಮ್ಮ ಸಂಘಟನೆಯ ಕಾರ್ಯಕರ್ತರಿಗೂ ಜಿಲ್ಲಾಧ್ಯಕ್ಷರಿಗೂ ತಾಲೂಕ ಅಧ್ಯಕ್ಷರಿಗೂ ನಾವು ಮೊಟ್ಟ ಮೊದಲನೇದಾಗಿ ಸ್ಪಷ್ಟವಾಗಿ ಕಾರ್ಯಕರ್ತರಿಗೆ ಸಂದೇಶವನ್ನು ಸಾರುತ್ತೇವೆ. ಎಲ್ಲಿ ಸಾರ್ವಜನಿಕರಿಗೆ ಅನ್ಯಾಯವಾಗುವುದು ಭಾಷೆಯ ವಿಚಾರದಲ್ಲಿ ತೊಡಕಾಗುತ್ತದೆ ಅಲ್ಲಿ ನಮ್ಮ ಸಂಘಟನೆ ಎಚ್ಚರ ವಹಿಸುವ ಕೆಲಸವನ್ನು ಮಾಡುತ್ತದೆ. ನಿರಂತರವಾಗಿ ಸಮಾಜಘಾತಕ ಚಟುವಟಿಕೆಗಳು ಕಂಡು ಬಂದಲ್ಲಿ ಸಂಘಟನೆಯಿಂದ ಅಂತಹ ವಿಚಾರಗಳನ್ನು ಕಿತ್ತೊಗೆಯುವ ಕೆಲಸ ಮಾಡಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ಸರ್ಕಾರಕ್ಕೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಹಾಗೆ ಸೂಚಿಸಲಾಗುತ್ತದೆ ಎಂದರು.

ನಾಡಿನ ವಿಚಾರವಾಗಿ ತೊಂದರೆ ಕಂಡು ಬಂದಲ್ಲಿ ಯಾವ ಅಧಿಕಾರಿಗಳಿಗೂ ಯಾವ ಸರ್ಕಾರಗಳಿಗೂ ಹೆದರುವ ಪ್ರಶ್ನೆಯೇ ಇಲ್ಲ, ಧೈರ್ಯವಾಗಿ ಮುನ್ನುಗ್ಗಿ ಸರಿಪಡಿಸುವಂತಹ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಾಡು ನುಡಿಯ ವಿಚಾರವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು ನಮ್ಮ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ಸಹ ದಾಖಲಾಗಿವೆ. ನಾಡು ನುಡಿಯ ಸೇವೆ ಮಾಡುವ ವಿಚಾರದಲ್ಲಿ ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಸಲುವಾಗಿ ನಮ್ಮ ಮೇಲೆ ಪ್ರಕರಣಗಳನ್ನು ದಾಖಲು ಮಾಡಿ ಸಂಘಟನೆಗಳ ಪ್ರಾಪಲ್ಯ ಹಾಗೂ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ನಮ್ಮ ಸಂಘಟನೆಯ ಯವರು ಯಾವುದೇ ಕಾರಣಕ್ಕೂ ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಹಂಜುವ ಗೋಜಿಗೆ ಹೋಗಬಾರದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಸಂಘಟನೆಯ ಕಾರ್ಯಕರ್ತರಿಗೆ ಪೋಸ್ಟಿಂಗ್ ಹಂಚಿಕೆ:
ಇನ್ನು ಸೇನೆಯ ರಾಜ್ಯಧ್ಯಕ್ಷ ಬಸವರಾಜ ಪಡುಕೋಟೆ ಅವರ ಹುಟ್ಟುಹಬ್ಬಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ ನಂತರ ಕೆಲ ಕಾರ್ಯಕರ್ತರಿಗೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರದ ಪತ್ರಗಳನ್ನು ಸಹ ಇದೇ ವೇಳೆ ನೀಡಿದರು. ಸಂಘಟನೆಯಲ್ಲಿ ಹೇಗೆಲ್ಲಾ ಕೆಲಸ ಮಾಡಿಕೊಂಡು ಬರಬೇಕು, ಯಾವ ರೀತಿ ಹೋರಾಟಗಳನ್ನು ಮಾಡಬೇಕು ಎಂಬುದರ ಬಗ್ಗೆ ಸಭೆ ನಡೆಸುವ ಮೂಲಕ ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.
ಕಾನೂನಿಗೆ ವಿರುದ್ಧವಾಗಿ ದೇಶದ್ರೋಹದ ಕೆಲಸ ಯಾರು ಮಾಡುತ್ತಾರೋ ಅಂತಹವರ ವಿರುದ್ಧ ನಿರ್ಧಾಕ್ಷಿಣವಾಗಿ ಕಾನೂನನ್ನು ಕೈಗೆತ್ತಿಕೊಳ್ಳಿ ಎನ್ನುವ ಮೂಲಕ ಪಡುಕೋಟೆ ಅವರು ಕಾರ್ಯಕರ್ತರಿಗೆ ಸಂದೇಶವನ್ನು ಸಾರಿದರು. ನಿಮಗೆ ಏನೇ ಆದರೂ ನಾನು ಬೆಂಬಲಕ್ಕೆ ನಿಲ್ಲುತ್ತೇನೆ ಎನ್ನುವ ಮಾತುಗಳನ್ನು ಸಹ ಸ್ಪಷ್ಟಪಡಿಸಿದರು.

ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆಯ ಯುವ ಘಟಕದ ಅಧ್ಯಕ್ಷ ರಘು ಪಡುಕೋಟೆ ,ಬರಹಗಾರ ನಿರ್ದೇಶಕ ಸಾಹಿತಿ ಮಂಜು ಪಾಂಡವಪುರ, ಕಲಾವಿದ ಮೋಹನ್, ಹೋರಾಟಗಾರ ಹಾಗೂ ದಲಿತ ಮುಖಂಡ ಲಯನ್ ಬಾಲಕೃಷ್ಣ, ಅನೇಕರು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದರು.