LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಣಿಕಂಠನಿಗೆ ಆಶೀರ್ವಾದ ಮಾಡಿದ ನಾಗಸದುಗಳು!

ಬೆಂಗಳೂರು: ಭಕ್ತಿ ಸ್ವರೂಪದ ಒಳಗೆ ಲವ್ ಕಂ ಕಾಮಿಡಿ ಇರುವ ಮಣಿ ಕಂಠ ಎಂಬ ವಿಶೇಷ ,ವಿಭಿನ್ನ ಕನ್ನಡ ಸಿನೆಮಾ ನಿರ್ಮಾಣ ಮಾಡಲು  ಕಥೆ ಮತ್ತು ನಿರ್ದೇಶನ ಮಾಡಿರುವ ಸಂತೋಷ್ ಸಿಂಹ ಹೊರಟಿದ್ದು, ಮೊದಲನೇ ಸಿನೆಮಾದಲ್ಲೇ  ವಿಶಿಷ್ಟ ಸಾಹಸಕ್ಕೆ ಕೈಯಾಕಿದ್ದಾರೆ.


ಮಣಿಕಂಠ ಸಿನೆಮಾ ಮುಹೂರ್ತ ಶ್ರೀ ಧರ್ಮಶಾಸ್ತ  ಅಯ್ಯಪ್ಪ ದೇವಸ್ಥಾನದ ಮಹಾಲಕ್ಷೀ ಪುರಂನಲ್ಲಿನ ಸರಸ್ವತಿಪುರಂನಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಹೊಸ ಸಿನಿಮಾಗೆ ಆಕ್ಷನ್ ಕಟ್ಟು ಮಾಡಲಾಯಿತು. ನಾಗಸಾಧುಗಳು ನಿರ್ದೇಶಕರ ತಲೆ ಮೇಲೆ ಕೈ ಇಟ್ಟು ಒಳ್ಳೆದಾಗಲಿ ತಟಾಸ್ತು ಎಂದು ಸಿನೆಮಾಗೆ ಕ್ಲಾಪ್ ಮಾಡುವ ಮೂಲಕ ಆರಂಭಕ್ಕೆ ಶುಭವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.


ಈಗಾಗಲೇ ಅನೇಕ ಭಾಷೆಗಳಲ್ಲಿ ಸ್ವಾಮಿ ಅಯ್ಯಪ್ಪನ ಮೇಲೆ ಭಕ್ತಿ ಸ್ವರೂಪದ ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ   ಬಂದಿದ್ದಾವೆ, ಆದರೆ ಮಣಿಕಂಠ ಸಿನಿಮಾದಲ್ಲಿ. ಅರ್ಧಭಾಗ ಲವ್ ನಿಂದ ಪ್ರಾರಂಭವಾಗಿ ಇನ್ನರ್ಧ ಭಕ್ತಿಯಲ್ಲಿ ಸಿನೆಮಾ ಗೋಚರವಾಗುತ್ತದೆ. ಮಣಿಕಂಠ ಸಿನಿಮಾದಲ್ಲಿ ಐದರಿಂದ ಆರು ಪಾತ್ರಗಳು ಕಾಣಬರುತ್ತದೆ. ಒಬ್ಬ ಬಾಲಕ ಮಣಿಕಂಠನಾಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ.


ಮಣಿಕಂಠ ಸಿನಿಮಾದ ನಿರ್ದೇಶಕ, ಹಾಗೂ ನಿರ್ಮಾಣವನ್ನು ಸಂತೋಷ, ಅಶ್ವಿನಿ ಸಿಂಹ ಮಾಡಿದ್ದಾರೆ,ಕಲಾವಿದರಾದ ಸಂತೋಷ್ ಸಿಂಹ, ಅಶ್ವಿನಿ ಸಂತೋಷ್ ಸಿಂಹ, ಗುರು ಜೀವನ್ ಸಿಂಹ, ತನುಶ್ರೀ, ವೈಷ್ಣವಿ.ಎಸ್.ಎಸ್, ಶರತ್.ಎಸ್.ಎಂ, ಕೃಷ್ಣ.ಎಂ.ಆರ್, ಬಿ.ಎಲ್.ಮಂಜುಳ, ಮಮತ ಮತ್ತು ಶಿವಣ್ಣ ಇನ್ನಿತರರು ತೆರೆ ಹಂಚಿಕೊಂಡಿದ್ದಾರೆ.


ಇನ್ನು ಸಿನಿಮಾದ ನಿರ್ದೇಶಕ ಸಂತೋಷ್ ಸಿಂಹ ಮಾತನಾಡಿ, ಮಣಿಕಂಠ ಸಿನಿಮಾ ಮೊದಮೊದಲು ಒಂದು ಪ್ರೇಮದ ಮೂಲಕ ಪ್ರಾರಂಭವಾಗಿ ತದನಂತರ ಭಕ್ತಿಯ ಸ್ವರೂಪವನ್ನು ಪಡೆದುಕೊಳ್ಳುವ ರೀತಿಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ. ಕಷ್ಟ ಸುಖಗಳು ಹೇಗೆ ಬರುತ್ತವೆ ಎಂಬುದನ್ನು ಸಹ ಸಿನಿಮಾದಲ್ಲಿ ಮೂಡಿ ಬರುವ ಹಾಗೆ ಸಿದ್ಧತೆ ನಡೆಸಲಾಗಿದೆ. ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಹೇಗೆ ಋತವನ್ನು ಮಾಡಬೇಕು ಆಚರಣೆಗಳು ಹೇಗಿರುತ್ತವೆ, ಅಲ್ಲಿನ ಕೆಲವು ನಿಬಂಧನೆಗಳೇನು? ಅದರಲ್ಲಿಯೂ ಮಹಿಳೆಯರ ಬಗ್ಗೆ ಹಾಗೂ ದೇವಸ್ಥಾನ ಮಹಿಳೆಯರ ಪ್ರವೇಶದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಹ ಈ ಸಿನಿಮಾದ ಮೂಲಕ ತಿಳಿದುಕೊಳ್ಳಬಹುದಾಗಿದೆ.


ಇಡೀ ಸಿನಿಮಾ ಬೆಂಗಳೂರು ಸೇರಿದಂತೆ ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ ಕೆಲವೊಂದು ಚಿತ್ರೀಕರಣ ನಡೆಸಲಾಗುತ್ತದೆ. ಕಡಿಮೆ ಬಜೆಟ್ ನಲ್ಲಿ ಒಂದು ಭಕ್ತಿ ಸ್ವರೂಪದ ಹಾಗೂ ಕಾಮಿಡಿ ಜಲಕನ್ನು ಕಡಿಮೆ ಬಜೆಟ್ ನಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಡುವಂತಹ ಪ್ರಯತ್ನವನ್ನು ಸಂತೋಷ ಸಿಂಹ ಅವರು ಮಾಡಿಕೊಡಲಿದ್ದಾರೆ.


ಮಣಿಕಂಠ ಸಿನಿಮಾ ಕನ್ನಡದಲ್ಲಿ ಅಮೋಘವಾಗಿ ಚಿತ್ರಿಕರಣಕ್ಕೆ ಸಿದ್ಧವಾಗಿದ್ದು ವಿಶೇಷ ವಿಭಿನ್ನ ವಿಶಿಷ್ಟವಾಗಿ ನಿರ್ದೇಶಕರು ಸಿಹಿ ರಸಿಕರಿಗೆ ತೋರಿಸಲು ಹಾಗೂ ಚಿತ್ರೀಕರಣ ಮಾಡಲು ಹೊರಟಿದ್ದಾರೆ. ಈ ಸಿನಿಮಾ ನಿರ್ದೇಶಕರಿಗೆ ಹೊಸ ಅನುಭವವನ್ನು ಕೊಡುತ್ತಿದ್ದು ಹಾಗೂ ಮೊದಲನೇದಾಗಿದೆ. ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವ ಸಹ ನಿರ್ದೇಶಕರಿಗೆ ಇದೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ