LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಹೊಸ ಧಾರಾವಾಹಿ 'ಜೈ ಲಲಿತಾ'

ಬೆಂಗಳೂರು: ಕರ್ನಾಟಕದ ಮನ ಮಂದಿ ಎಲ್ಲಾ ಹಾಗೂ ನಾಡಿನ ಜನತೆ ಇಷ್ಟಪಡುವಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣದಲ್ಲಿ ಇದೀಗ ಹೊಸ ಧಾರಾವಾಹಿ ಜೈ ಲಲಿತಾ' ಸೇರ್ಪಡೆಯಾಗುತ್ತಿದೆ. ಭ್ರಾಮರೀ ಕ್ರಿಯೇಶನ್ಸ್ ಅಡಿಯಲ್ಲಿ ಶ್ರೀನಿಧಿ ನಿರ್ಮಾಣ ಮಾಡುತ್ತಿದ್ದು ದರ್ಶಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಡಿಸೆಂಬರ್ 8ರಿಂದ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲು ಸಜ್ಜಾಗಿದೆ.

ಜೈ ಲಲಿತಾ ಧಾರವಾಹಿಯ ಒಟ್ಟಾರೆ ಹಿಂದಿರುವ ಕಥೆ

ಧಾರಾವಾಹಿಯ ಒಟ್ಟಾರೆ ಕಥೆಯ ಕುರಿತು ಹೇಳುವುದಾದರೆ ಭೈರವಪುರ ಹಳ್ಳಿಯ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಲಲಿತಾ, ಅಪ್ಪನಿಗೆ ಮುದ್ದಿನ ಪುತ್ರಿಯಾದರೆ, ಊರಿನವರಿಗೆ ಮನೆ ಮಗಳು. ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿ ಎರಡನೇ ಮಗ ಜೈರಾಜ್ ತನಗನಿಸಿದನ್ನೇ ಮಾಡೋ ಶೂರ. ಅಚಾನಕ್ ಆಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಲಲಿತಾ ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗುತ್ತಾಳೆ.

ಮುಂದೆ ದೇವರಾಜ್ ಚಕ್ರವರ್ತಿ ಮಗನಿಗೆ ಇಷ್ಟವಿಲ್ಲದಿದ್ದರೂ ಸ್ವಾರ್ಥಕ್ಕಾಗಿ ಲಲಿತಾಳನ್ನು ಸೊಸೆಯನ್ನಾಗಿ ಮಾಡಿಕೊಳ್ತಾನೆ. ನಂತರ ಆಕೆಯ ನಡೆ ಎಲ್ಲಿಗೆ ಕರೆದುಕೊಂಡು ಹೋಗುತ್ತದೆ. ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಸ್ಥಾನವನ್ನು ಪಡೆದುಕೊಳ್ತಾಳ? ಆಕೆಯ ಮುಗ್ದತೆಗೆ ಕರಗಿ ಜೈರಾಜ್ ಮನಸೋಲ್ತಾನಾ? ಎಂಬುದು ಸೀರಿಯಲ್ ಸಾರಾಂಶವಾಗಿದೆ.

https://youtu.be/2THEJcf9494?si=74lEMtCw_LCAK7eA

ದಾರವಾಹಿಯಲ್ಲಿ ಹೊಸಬರ ಅಳಬರ ಆಟ:

ಜೈರಾಜ್ ಆಗಿ ಶಿವಾಂಕ್ ನಾಯಕ. ಲಲಿತಾ ಪಾತ್ರದಲ್ಲಿ ಮನಸ್ವಿ ನಾಯಕಿ. ಮಾವನಾಗಿ ಸುನಿಲ್‌ ಪುರಾಣಿಕ್, ಅತ್ತೆಯಾಗಿ ಸ್ಪಂದನ. ಉಳಿದಂತೆ ರೋಹಿತ್, ನಿರಂಜನ್, ರಶ್ಮಿತಾ, ಶ್ವೇತಾರಾವ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ಅಭಿಯಿಸುತ್ತಿದ್ದಾರೆ. ಧಾರವಾಹಿ ಪೇಟ ಸಿನಿಮಾದ ರೀತಿಯಲ್ಲಿಯೇ ಪ್ರತಿ ದಿನ ಮುಂದುವರಿಯಲಿದೆ ಸೋತ್ರಗಳು ಹಾಗೂ ಕುಟುಂಬಸ್ಥರೆಲ್ಲರೂ ಸೇರಿಕೊಂಡು ನೋಡುವ ವಿಭಿನ್ನ ಧಾರವಾಹಿ ಆಗಿದೆ.

ಇದೇ ಸೋಮವಾರದಿಂದ (ಡಿಸೆಂಬರ್ 8) ಪ್ರತಿದಿನ ರಾತ್ರಿ 9.30ಕ್ಕೆ ’ಸ್ಟಾರ್ ಸುವರ್ಣ’ದಲ್ಲಿ ’ಜೈ ಲಲಿತಾ’ ಧಾರಾವಾಹಿ ಪ್ರಸಾರವಾಗಲಿದೆ. ಮನೆ ಮುಂದೆ ಎಲ್ಲಾ ಕುಳಿತು ನೋಡುವಂತಹ ವಿಶೇಷವಾದಂತಹ ದಾರವಾಹಿಯಾಗಿದೆ.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ