LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೆಂಪು, ಹಳದಿ, ಹಸಿರು ನಲ್ಲಿ ಕಾಮಿಡಿ ಝಲಕ್!

ಬೆಂಗಳೂರು: ವಿಭಿನ್ನ ಶೀರ್ಷಿಕೆ ಕೆಂಪು ಹಳದಿ ಹಸಿರು ಚಿತ್ರದ ಹಾಡುಗಳು ಮತ್ತು ಟ್ರೇಲರ್ ಬಿಡುಗಡೆ ಸಮಾರಂಭವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸನ್‌ರೈಸ್ ಎಂಟರ್‌ಟೈನ್‌ಮೆಂಟ್ ಅಂಡ್ ಫಿಲಂಸ್ ಬ್ಯಾನರ್  ಮೂಲಕ ಪ್ರಸಾದ್‌ಕುಮಾರ್ ನಾಯ್ಕ್ ಬಂಡವಾಳ ಹೂಡುತ್ತಿರುವುದು ಮೂರನೇ ಅನುಭವ.


ಒಂದು ತುಳು ಸಿನಿಮಾ ನಿರ್ದೇಶನ ಮಾಡಿರುವ ಮಣಿ.ಎಜೆ.ಕಾರ್ತಿಕೇಯನ್ ಮೊದಲ ಬಾರಿ ಕನ್ನಡ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ’ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಅರ್ಥಪೂರ್ಣ ಅಡಿಬರಹ ಇರಲಿದೆ. ಬಾಲಾಜಿ ಫಿಲಂ ವರ್ಕ್ಸ್ ಅಡಿಯಲ್ಲಿ ಪ್ರಸಾದ್ ಈರ್ಲಾ ಮತ್ತು ಹರೀಶ್ ಧಾಸ್ಮಾನ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೂ ಮೂರು ಸಿನಿಮಾ ಮಾಡಿರುವ ಅನುಭವಗಳಿವೆ.


ಉದ್ಯಮಿಯ ಮಗನಾಗಿ ಯಾವುದೋ ಒಂದು ಕಾರಣಕ್ಕಾಗಿ ಡಿಲಿವರಿ ಬಾಯ್ ಆಗಿರುವ ಶ್ರೀಹನ್‌ದೀಪಕ್ ನಾಯಕ. ದಿವ್ಯಾಸುರೇಶ್ ನಾಯಕಿ. ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಅರವಿಂದ್ ಬೋಳಾರ್, ’ಒಂದು  ಮೊಟ್ಟೆಯ ಕಥೆ’ಯಲ್ಲಿ ಮುಖ್ಯ ಪಾತ್ರವಹಿಸಿದ್ದ ಶೈಲಾಶ್ರೀ ಮುಲ್ಕಿ ಉಳಿದಂತೆ ಚಿಂದೋಡಿ ವಿಜಯ್‌ಕುಮಾರ್, ಶ್ರೀಜನ್, ಮೀನಾಕ್ಷಿಹರ್ತಿ, ಮಾನಸ್, ಉಮೇಶ್‌ಹೆಗಡೆ ಕಡ್ತಲಾ  ಮುಂತಾದವರು ಅಭಿನಯಿಸಿದ್ದಾರೆ.


     ಛಾಯಾಗ್ರಹಣ ಮಂಜುನಾಥ್ ನಾಯಕ್, ನಿರ್ದೇಶಕರು ಹಾಗೂ ಕಿಶೋರ್ ಮೂಡಬಿದ್ರ್ರೆ ಬರೆದಿರುವ ನಾಲ್ಕು ಹಾಡುಗಳಿಗೆ ಮುಂಬೈ ಮೂಲದ ವಿಕಾಶ್ ವಿಶ್ವಕರ್ಮ ಸಂಗೀತ ಸಂಯೋಜಿಸಿದ್ದಾರೆ. ಸಂಕಲನ ಸತೀಶ್ ಈರ್ಲಾ, ಹಿನ್ನಲೆ ಶಬ್ದ ಪ್ರೇಮ್ ಭರತ್, ನೃತ್ಯ ಗೀತಾ (ಸ್ಪೆ) ಅವರದಾಗಿದೆ.


       ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಹೆಸರೇ ಹೇಳುವಂತೆ ಪಾತ್ರಗಳ ಭಾವನೆಗಳನ್ನು ಹೇಳಲಾಗುತ್ತಿದೆ. ಕೆಂಪು, ಹಳದಿ, ಹಸಿರು ಎನ್ನುವಂತ ಮೂರು ರೋಲ್‌ಗಳು ಇರುತ್ತದೆ. ಇವರು ಸನ್ನಿವೇಶಗಳನ್ನು ಹುಡುಕಲು ಹೋದಾಗ ಉತ್ತರ ಸಿಗುತ್ತದೆ. ಅದನ್ನು ಹೇಗೆ ಎದುರಿಸುತ್ತಾರೆ. ತ್ರಿಕೋನ ಪ್ರೇಮಕಥೆಯು ಸೆಸ್ಪೆನ್ಸ್, ಥ್ರಿಲ್ಲರ್ ಕಾಮಿಡಿಯಾಗಿ ಹೋಗುತ್ತದೆ. ಸಣ್ಣ ಎಳೆ ಬಿಟ್ಟುಕೊಟ್ಟರೂ ಒಟ್ಟಾರೆ ಸಿನಿಮಾದ ಸಾರ ತಿಳಿಸಿದಂತೆ ಆಗುತ್ತದೆ. ಅದಕ್ಕಾಗಿ ಗೌಪ್ಯವಾಗಿಡಲಾಗಿದೆ. ಮಂಗಳೂರು, ಉಡುಪಿ, ದಕ್ಷಿಣ ಕನ್ನಡ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ ನಲ್ಲಿ ತೆರೆಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಮಣಿ.ಎಜೆ.ಕಾರ್ತಿಕೇಯನ್ ಮಾಹಿತಿ ನೀಡಿದರು.


ಸಿನಿಮಾದಲ್ಲಿ ಒಟ್ಟು 6-7 ಪಾತ್ರಗಳು ಬರುತ್ತವೆ. 4-5 ಹಾಡುಗಳು ಇದ್ದಾವೆ.  ಪಾತ್ರಗಳಲ್ಲಿ ಕೆಮಿಸ್ಟ್ರಿ ಸಕತ್ ಮಜಾ ಕೊಡುತ್ತದೆ. ನಿರ್ದೇಶಕರ ಕನ್ನಡದಲ್ಲಿ ಮೊದಲ ಚಿತ್ರವಾಗಿದೆ. 3 ಜನರ ಪಾತ್ರ ಹಳದಿ,ಕೆಂಪು,ಹಸಿರು ಮೂಲಕ ನಡೆಯುತ್ತದೆ. ಇಡೀ ಸಿನೆಮಾ ಕನ್ನಡ ಭಾಷೆಯಲ್ಲಿ ಮಾಡಲಾಗಿದೆ.


ಪ್ರಸಾದ್ ಕುಮಾರ್ ನಾಯಕ್, ನಿರಮಾಪಕ, ಪ್ರಸಾದ್ ಬೋಳಾರ್ ಕೋ ಡೈರೆಕ್ಟರ್, ಮಣಿ ಆರ್ ಜೆ ಕಾರ್ತಿಕೇಯನ್ ಸಿನೆಮಾ ನಿರ್ದೇಶಕ, ಮೇಕಪ್ ಧನಂಜಯ್, ಧಿವ್ಯ ಸುರೇಶ್ ನಾಯಕಿ ನಟಿ, ವಿಕಾಸ್ ವಿಶ್ವಕರ್ಮ ಸಂಗಿತ ನಿರ್ದೇಶಕ, ಮಂಜುನಾಥ್ ಬಿ ನಾಯಕ್ ಡಿಓಪಿ, ನಟನ ಪತ್ನಿ ಜೊತೆಯಲ್ಲಿದ್ದರು. ಬೋಳಾರ್ ಅರವಿಂದ್, ಕಾಮಿಡಿಯಲ್ಲಿ ಕಾಣಿಸಿಕೊಂಡಿದ್ದಾರೆ.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ