LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಮ್ಮನ ಮಡಿಲು ಟ್ರಸ್ಟ್ ನಿಂದ 2 ದಿನಗಳ ನಾಟಕೋತ್ಸವಕ್ಕೆ ಚಾಲನೆ

ಬೆಂಗಳೂರು :  ರವೀಂದ್ರ ಕಲಾಕ್ಷೇತ್ರದಲ್ಲಿರುವ ನಯನ ಸಭಾಂಗಣದಲ್ಲಿ  ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ ) ವತಿಯಿಂದ 2 ದಿನಗಳ ಕಾಲ ರಣದುಂದುಭಿ ಹಾಗೂ ವರ ಭ್ರಷ್ಟ ಎಂಬ ಸುಂದರ ಐತಿಹಾಸಿಕ ನಾಟಕೋತ್ಸವ ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆಯಿತು.news_1781531405_0_324.webp

ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ ಕೆ ವಿ ನಾಗರಾಜ್ ಮೂರ್ತಿ, ಹಿರಿಯ ಪತ್ರಕರ್ತ ಚಂದ್ರಶೇಖರ್ ಯಲಬುರ್ತಿ ಆವರು ದೀಪ ಬೆಳಗಿಸುವ ಮೂಲಕ  ಚಾಲನೆ ನೀಡಿ ಮಾತನಾಡಿದ  ಆವರು, ಇಂದಿನ ಒತ್ತಡದ ಬದುಕಿನಲ್ಲಿ  ಜೀವನದ ಮೌಲ್ಯಗಳನ್ನು ತಿಳಿಸುವ ಇಂತಹ ಐತಿಹಾಸಿಕ ನಾಟಕಗಳು ಈ ಮಾಯನಗರಿ ಬೆಂಗಳೂರಿನಲ್ಲಿ ನಡೆಯುತ್ತಿರುವುದು ಸಂತಸದ ವಿಷಯ, ಜೊತೆಗೆ  ಏಐ ಯುಗದಲ್ಲಿ  ರಂಗಭೂಮಿ  ಎಂದೆಂದಿಗೂ ಪ್ರಸ್ತುತ ಎಂದು ನಾಟಕೋತ್ಸವ ಆಯೋಜಿಸಿರುವ ಅಮ್ಮನ ಮಡಿಲು ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಲೆಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ:

ಪತ್ರಕರ್ತರಾದ ಚಂದ್ರಶೇಖರ್ ಯಲಬುರ್ತಿ ಮಾತನಾಡಿ ಇಂದಿನ ವೈಜ್ಞಾನಿಕ ಯುಗದಲ್ಲಿ ಇಂತಹ ನಾಟಕಗಳನ್ನು ಏರ್ಪಡಿಸಿ ಕಲೆಯನ್ನು ನಿರಂತರವಾಗಿ 
 ಮುಂದಿನ ಪೀಳಿಗೆಗೆ ಜೀವಂತವಾಗಿ ಇಡಲು ಶ್ರಮಿಸುತ್ತಿರುವ ಅಮ್ಮನ ಮಡಿಲು ಟ್ರಸ್ಟ್ ಅಧ್ಯಕ್ಷರಾದ ಶ್ರೀ ಮತಿ ವರಲಕ್ಷ್ಮಿ ಅವರಿಗೆ ಅಭಿನಂದನೆಗಳು. ಮೂಲತಃ ವರಲಕ್ಷ್ಮಿ ರಂಗಭೂಮಿ, ಹಾಗೂ ಚಲನಚಿತ್ರ ಕಲಾವಿದರು, ನೂರಾರು ನಾಟಕ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಕಲಾವಿದೆಯಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಇಂತವರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಇವರ ಕಲಾಸೇವೆ ಗುರುತಿಸಿ ಸರ್ಕಾರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರ ಹಾಗೂ ನಾಟಕ ಅಕಾಡೆಮಿ ಯನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಕಲಾರಾಧನ ನಾಟ್ಯ ಶಾಲೆಯ ಮಕ್ಕಳಿಂದ ಭರತನಾಟ್ಯ, ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮ ಜರುಗಿದವು. news_1781531406_2_779.webp

ಕಾರ್ಯಕ್ರಮದಲ್ಲಿ   ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಆರ್ ಚಂದ್ರಶೇಖರ್,  ಅಮ್ಮನ ಮಡಿಲು ಸಾಮಾಜಿಕ ಸಾಂಸ್ಕೃತಿಕ ಹಾಗೂ ಕಲಾ ಟ್ರಸ್ಟ್ ಆಧ್ಯಕ್ಷೆ ವರಲಕ್ಷ್ಮಿ, ಡಿ, ರಾಜು ಹೈಕೋರ್ಟ್ ವಕೀಲರು, ಮುನಿರಾಜು ಪೊಲೀಸ್ ಇನ್ಸ್ಪೆಕ್ಟರ್, ಆರ್ ರಾಮಕೃಷ್ಣ ಕಲಾವಿದರು,ಸುಮಿತ್ರ ಬಿ ಕೆ  ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮಹಿಳಾ ರಾಷ್ಟ್ರೀಯ ಒಕ್ಕೂಟ,ಕುಸುಮಾ ಕೋಟೆ ಸಮತಾ ಮಹಿಳಾ ಸಂಘದ ಅಧ್ಯಕ್ಷರು, ಸದಾನಂದ್ ಜೂನಿಯರ್ ವಿಷ್ಣುವರ್ಧನ್  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖ್ಯಾತ ಸಿನಿತಾರೆ ಕರಣ್ ಕುಂದ್ರಾ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫೀನಿಕ್ಸ್ ಶಾಪಿಂಗ್ ಫೆಸ್ಟಿವಲ್ ಅದ್ಧೂರಿ ಚಾಲನೆಶಬರಿಮಲೆ ಯಾತ್ರೆ ಕೈಗೊಂಡ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಪದ್ಮನಾಭನಗರದಲ್ಲಿ ಗುರುಪಾದ ಪೂಜೆ, ಭಜನೆ ಹಾಗೂ ಧಾರ್ಮಿಕ ಜಾಗೃತಿ ಮೆರವಣಿಗೆ ತಾಲ್ಲೂಕು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ : BO, ಎ.ಜೆ.ಕೃಷ್ಣೇಗೌಡ ಅಭಿನಂದನೆಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದಿಂದ 41ನೇ ಮಾಸಿಕ ಸಾಹಿತ್ಯ ಪಯಣ ಹೆಜ್ಜೆಸಮಾನತೆ, ಸಾಮಾಜಿಕ ನ್ಯಾಯದ ಜಪ ಮಾಡುವ ಕಾಂಗ್ರೆಸ್ ಸರ್ಕಾರದ ದ್ವಂದ್ವ ನೀತಿಗೊಂದು ಜ್ವಲಂತ ಸಾಕ್ಷಿ ಇಲ್ಲಿದೆ!ಇಂಧನ. ಎಸ್ಕಾಂಗಳ ಲೈನ್ ಮ್ಯಾನ್ ಗಳು ಕಡ್ಡಾಯ ಸಮವಸ್ತ್ರ,ಗುರುತಿನ ಚೀಟಿ ಧರಿಸಲು ಆದೇಶಜಿಮ್ ಗಳಲ್ಲಿನ ಹಲ್ಲೆ ದೌರ್ಜನ್ಯ ಅನಧಿಕೃತ ಚಟುವಟಿಕೆ ನಿಲ್ಲಿಸಲು ಡಿಜಿಪಿಗೆ ಪತ್ರವೈಟ್ ಟಾಪಿಂಗ್ ಕಾಮಗಾರಿಗಳಿಗೆ ವೇಗ ನೀಡಿ: ಮಹೇಶ್ವರ್ ರಾವ್ಇ-ಖಾತಾ ತಿದ್ದುಪಡಿಯ ಜವಾಬ್ದಾರಿಯನ್ನು ಉಪ ಆಯುಕ್ತರಿಗೆ ನೀಡಲು ಸೂಚನೆ : ಮಹೇಶ್ವರ್ ರಾವ್