ಬೆಂಗಳೂರು: ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟಿಗೆ ರೂ. 10,00,000/- (ಹತ್ತು ಲಕ್ಷ ರೂ. ) ದೇಣಿಗೆ ನೀಡುವ ಮೂಲಕ ಟ್ರಸ್ಟಿನ "ಪ್ರಧಾನ ಮಹಾ ಪೋಷಕರಾಗಿ ಹರದನಹಳ್ಳಿ ವಿಜಯಕುಮಾರ್ ಅವರನ್ನು ಗೋಷಣೆ ಮಾಡಲಾಗಿದೆ.
ಹರದನಹಳ್ಳಿ ವಿಜಯಕುಮಾರ್ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಖ್ಯಾತ ಉದ್ಯಮಿಗಳು ಆಗಿದ್ದಾರೆ. ಉಪ್ಪರ ಸಮಾಜದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬೃಹತ್ ಮತದ ಹಣವನ್ನು ಬೇಡಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.
ಹೀಗಾಗಿ ಬೆಂಗಳೂರಿನಲ್ಲಿರುವ ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟಿನಲ್ಲಿ ಭಾನುವಾರದ "ಚಿಂತನ-ಮಂಥನ" ಸಭೆ ಇತ್ತು, ಅದರ ಸಭೆಗೆ ವಿಜಯ್ ಕುಮಾರ್ ಅವರನ್ನು ಆಹ್ವಾನಿಸಿದರು ಈ ವೇಳೆ ಸಂಘದ ವತಿಯಿಂದ ಹರದನಹಳ್ಳಿ ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಇನ್ನೂ ಇದೆ ವೇಳೆ ಟ್ರಸ್ಟ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.