LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತಿ ಟೀಚರ್ 7ನೇ ತರಗತಿ ಸಿನಿಮಾ ಹಾಡು ಬಿಡುಗಡೆ

ಬೆಂಗಳೂರು: ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಲನಚಿತ್ರಗಳು ಕಡಿಮೆಯಾಗುತ್ತಿರುವ ಕಾಲದಲ್ಲಿ ಕಥೆ,ಚಿತ್ರಕಥೆ,ಸಂಭಾಷಣೆ ಮೂಲಕ ವಿಭಿನ್ನ ಕಥೆ ಕಟ್ಟಿಕೊಟ್ಟಿರುವ ಪ್ರಸನ್ನ ಅವರು ಹೊಸ ಸಾಹಸಕ್ಕೆ ಕೈ ಹಾಕಿ ಭಾರತಿ ಟೀಚರ್ 7ನೇ ತರಗತಿ ಸಿನಿಮಾ ವೀಕ್ಷಕರಿಗೆ ಹೊಸ ಸಮಾಜದ ರಿಯಾಲಿಟಿಯನ್ನು ತೋರಿಸುವ ಕೆಲಸ ಮಾಡಲಾಗಿದೆ.


ಅಂದಹಾಗೆ ಸಿನಿಮಾ ಚಿತ್ರೀಕರಣ ಬಹುತೇಕ ಮುತ್ತಾಯದ ಹಂತಕ್ಕೆ ಬಂದಿದ್ದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಹಾಡುಗಳನ್ನು ಬಿಎಇಗಡೆ ಮಾಡಲಾಯಿತು.  ಇಡೀ ಸಿನೆಮಾ  ಶಿಕ್ಷಣವನ್ನು ಪ್ರೊತ್ಸಾಹಿಸುವ , ಅರಿವನ್ನು ಮೂಡಿಸುವ ಹಂತಹಂತವಾಗಿ ಪುಟ್ಟ ಬಾಲಕಿ ಹೇಗೆ ಶಿಕ್ಷಣ ಕ್ರಾಂತಿಯನ್ನು ಮೂಡಿಸಿದ್ದಾಳೆ ಎಂಬುದು ಸಿನಿಮಾದ ತಿರುಳಾಗಿದೆ. ಪೂಜ್ಯಾಯ ಫಿಲಂಸ್ ಸಂಸ್ಥೆಯಡಿ ಸಿನೆಮಾ ನಿರ್ಮಾಣ ಆಗುತ್ತಿದೆ.


ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ,ಸಂಗೀತ ನಿರ್ದೇಶನ ಮಾಡಿತುವ ಎಂ ಎಲ್ ಪ್ರಸನ್ನ ಅವರು ಮಾತನಾಡಿ, ಭಾರತಿ ಟೀಚರ್ ಚಲನಚಿತ್ರ  ಬೇರೆ ಸಿನೆಮಾಗಳಿಗಿಂತ ವಿಭಿನ್ನವಾಗಿದ್ದು, ಇದೊಂದು ಸಮಾಜಸುಧಾರಣೆ ನಿಟ್ಟಿನಲ್ಲಿ ಕಥೆ ಇದ್ದು, ಇಡೀ ಸಿನೆಮಾವನ್ನು ಪಾಂಡವಪುರದ ಒಂದು ಚಿಕ್ಕಹಳ್ಳಿಯ ಸುತ್ತಮುತ್ತಲ್ಲಿ ಚಿತ್ರಣ ಮಾಡಲಾಗಿದೆ.


ಸಿನೆಮಾದಲ್ಲಿ ಒಟ್ಟು 10ಹಾಡುಗಳು ಇದ್ದು ಎಲ್ಲವನ್ನು ಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಕಮರ್ಷಿಯಲ್ ದುನಿಯಾ ಕಾಲದಲ್ಲಿ ಸಾಮಾಜಿಕ ಕಳಕಳಿ ಇರುವ ಸಿನಿಮಾ ಮಾಡುವುದೇ ಒಂದು ಸವಾಲು, ಅದರಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಸಿನೆಮಾ ಮಾಡಿದರೆ ನೋಡುಗರು ಇದ್ದಾರೆ ಎಂದರು. ನವೆಂಬರ್ ಕೊನೆ ವಾರದಲ್ಲಿ ಸಿನೆಮಾ ಬಿಡುಗಡೆ ಮಾಡುವುದಾಗಿ ಸಿದ್ದತೆ ಮಾಡಿಕೊಳ್ಳಲಾಗಿದೆ.


ಚಿತ್ರದ ನಿರ್ಮಾಪಕ ರಾಘವೇಂದ್ರ ರೆಡ್ಡಿ ಮಾತನಾಡಿ, ನನ್ನ ಮೊದಲ ಸಿನೆಮಾ ಇದಾಗಿದೆ, ನಾನೊಬ್ಬ ಉದ್ಯಮಿಯಾಗಿದ್ದು, ಅಣ್ಣವರ ಅಭಿಮಾನಿ ಜೊತೆಗೆ ದಿ.ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ, ಹೀಗಾಗಿ ಸಿನೆಮಾ ಮಾಡುವ ಗೀಳು ಹುಟ್ಟಿಕೊಂಡಿತು. ಒಟ್ಟು 8 ಪಾತ್ರಗಳು ಇದ್ದು ಅವರವರ  ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.


ಬಹಳ ಮುಖ್ಯವಾಗಿ ಸಿನೆಮಾದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಿಲ್ಲಾಧಿಕಾರಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಕೆಲಸದ ಒತ್ತಡದಿಂದ ಚಿತ್ರಿಕರಣದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ, ಅವರ ಕಾಲ್ ಶೀಟ್ ಗಾಗಿ ಕಾಯುತ್ತಿದ್ದೇವೆ ಎಂದರು. ಚಿತ್ರೀಕರಣದ ವೆಚ್ಚ ಸುಮಾರು 40-50 ಲಕ್ಷ ಅಂದಾಜು ಇಟ್ಟುಕೊಂಡಿದ್ದೀವಿ.ಆದರೆ 1 ಕೋಟಿ ದಾಟುತ್ತದೆ ಎಂದರು. ನಾನು ಸಹಾ ಒಂದು ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ವಿಶೇಷತೆ ಬಗ್ಗೆ ತಿಳಿಸಿದರು.


ಚಲನಚಿತ್ರದ ನಿರ್ಮಾಪಕ ,ವಿತರಕ, ಕ್ರಿಯೇಟೀವ್ ಹೆಡ್ ವೆಂಕಟ್ ಗೌಡ, ಕಾರ್ಯಕಾರಿ ನಿರ್ಮಾಪಕರಾದ ರಾಘವ್ ಸೂರ್ಯ, ದರ್ಶನ್ ಗೌಡ,ಸಹಯೊಇಗ ಕ್ರಷಿ ಸ್ಟುಡಿಯೊಸ್, ಛಾಯಗ್ರಹಣದಲ್ಲಿ ಎಂಬಿ ಅಳ್ಳಿಕಟ್ಟಿ ಅವರ ಸೆರೆಹಿಡಿದಿರುವ ದೃಶ್ಯಗಳು ವಿಶೇಷವಾಗಿವೆ, ನೈಸರ್ಗಿಕವಾಗಿ ದೃಶ್ಯ ಸೆರೆಹಿಡಿದಿದ್ದು, ಅದ್ಬುತವಾಗಿ ಮೂಡಿ ಬಂದಿವೆ.


ಇನ್ನು ಸಿನೆಮಾದಲ್ಲಿ ನಟಿಸಿರುವ ಮುಖ್ಯ ಪಾತ್ರದಾರಿಗಳು ಸಿಹಿಕಹಿ ಚಂದ್ರು, ಕುಮಾರಿ ಯಶಿಕಾ,ದಿವ್ಯಾ ಅಂಚನ್ , ಬೆನಕಾ ನಂಜಪ್ಪಪಣ್ಣ,ಗೋವಿಂದೇಗೌಡ,ಆಶ್ವಿನ್ ಹಾಸನ್, ಸೌಜನ್ಯ ಸುನಿಲ್,ಎಂಜಿ ರಂಗ ಸ್ವಾಮಿ, ರೊಹಿತ್ ರಾಘವೇಂದ್ರ, ಸಹ ನಿರ್ದೇಶನ ಕಿರಣ್ ,ಇನ್ನು ಸಿನೆಮಾದಲ್ಲಿ ವಸ್ರಾಲಂಕಾರದಲ್ಲಿ ಪ್ರಕಾಶ್ ಅದ್ಬುತವಾಗಿ ಪಾತ್ರಗಳಿಗೆ ತಕ್ಕಂತೆ ಬಟ್ಟೆಗಳನ್ನು ಅಲಂಕರಿಸಿದ್ದಾರೆ.


ಪಾತ್ರದಾರಿಗಳು ಅವರಿಗೆ ಕೊಟ್ಟ ಪಾತ್ರಗಳಿಗೆ ಜೀವ ತುಂಬಿದ್ದಾರೆ, ಪಾತ್ರಗಳ ವಿಶೇಷತೆ ಬಗ್ಗೆ ಮಾಹಿತಿ ಹಂಚಿಕೊಂಡರು. ಸಿನೆಮಾ ವಿಶೇಷತೆ,ಅನುಭವ,ಚಿತ್ರೀಕರಣದ ಚಿತ್ರಣ ಎಳೆಎಳೆಯಾಗಿ ಬಿಡಿಸಿ ಹೇಳಿದರು. ಅಲ್ಲದೆ ಹಾಡು ರೀಲೀಸ್ ವೇಳೆ ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
PTCL ಕಾಯ್ದೆಯಡಿಯಲ್ಲಿ ಭೂಮಿ ರಕ್ಷಣೆ ಮಾಡಿ: ಧನರಾಜು ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿಬೆಲೆ ಏರಿಕೆಯಿಂದ ತತ್ತರಿಸಿದ ಹೋಟೆಲ್ ಉದ್ಯಮ, ಅಡುಗೆ ಅನಿಲ: ಜಿ ಎಸ್ ಟಿ  ಇಳಿಸಿ: ಹೋಟೆಲ್ ಉದ್ಯಮ ರಕ್ಷಿಸಿ:  ರಾಜ್ಯ-ಕೇಂದ್ರ ಸರಕಾರಕ್ಕೆ ಕೆ ಎಸ್ ಎಚ್ ಎ ಮನವಿPTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್PTCL ಕಾಯ್ದೆಯಡಿಯಲ್ಲಿನ ಭೂಮಿ ರಕ್ಷಣೆ ಮಾಡಿ: ಮಂಜುನಾಥ್ಚುನಾವಣಾನಿರತ ಸಿಬ್ಬಂದಿಗಳು, ರಾಜಕೀಯ ಪಕ್ಷಗಳ ಸಮರ್ಪಕ ಸಮನ್ವಯತೆಯಿಂದ ಪಾರದರ್ಶಕ ಚುನಾವಣೆ ಸಾಧ್ಯ: ಪೊಮ್ಮಲ ಸುನೀಲ್ ಕುಮಾರ್ಬಾಗಲೂರು ಹಾರ್ಡ್‌ವೇರ್ ಪಾರ್ಕ್‌ನಲ್ಲಿ ಜೆಟ್ವರ್ಕ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ260 ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯದಲ್ಲಿ ಭಾಗಿಆನ್ ಲೈನ್ ಮೂಲಕ ಎಂಎಸ್ಐಎಲ್ ಚಿಟ್ ವ್ಯವಹಾರಕ್ಕೆ ಸಿಎಂ ಚಾಲನೆಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೋರಿಕೆ