ಬೆಂಗಳೂರು: ನಿಷಿದ್ಧ ಎನ್ನುವ ಪದ ಒಂದು ರೀತಿಯಲ್ಲಿ ಆಶ್ಚರ್ಯ,ಭಯ,ಕುತೂಹಲ ಹುಟ್ಟಿಸುವಂತಹದ್ದು. ಹೆಸರೇ ಹೇಳುವಂತೆ ಎಲ್ಲದಕ್ಕೂ ಬಂಧನದ ಕಟ್ಟಾಜ್ಞೆ ಇರುತ್ತದೆ. ಇಂತಹ ಎಲ್ಲ ಸನ್ನಿವೇಶವನ್ನು ಒಂದೇ ಕಡೆ ಕಟ್ಟಿಕೊಡುವ ಕೆಲಸವನ್ನು ನಿಷಿದ್ಧ ಚಲನಚಿತ್ರದಲ್ಲಿ ಮಾಡಲಾಗಿದೆ. 
ಸಿನಿಮಾದ ನಿರ್ದೇಶಕ ಸುಸಮಯ ದಿನೇಶ್ RR ಸಿನೆಮಾ ರೀತಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. Trilling,Suspence, ಎಲ್ಲವೂ ಸಿನೆಮಾದಲ್ಲಿ ಗೊಂದಲ ಸೃಷ್ಟಿಸುವ, ವೀಕ್ಷಕರಿಗೆ ವಿಶೇಷತೆ ಮೇಲೆ ವಿಶೇಷತೆ ಕಾಣುವ ಕಥೆ ಇದಾಗಿದೆ. ಕನ್ನಡ ಸಿನೆಮಾ ಇಂಡಷ್ಟ್ರಿಯಲ್ಲಿ ಒಂದು ಹೊಸ ಸಾಹಸಕ್ಕೆ ಕೈ ಹಾಕಲಾಗಿದೆ. ಜೀವನದಲ್ಲಿ ಬಹುತೇಕವಾಗಿ ನಿಷೇಧಗಳು ಬರುತ್ತವೆ ಅವೆಲ್ಲವನ್ನು ಮೀರಿ ನಡೆದುಕೊತ್ತಾರೆ. ನುಷೇಧಗಳನ್ನು ಮೀರಿದರೆ ಏನೆಲ್ಲಾ ಅನಾಹುತಗಳು ನಡೆಯುತ್ತವೆ ಎಂಬುದನ್ನು ಸಿನೆಮಾದಲ್ಲಿ ನಿರ್ದೇಶಕ ಅಚ್ಚುಕಟ್ಟಾಗಿ ಕಣ್ಣಿಗೆ ರಾಚುವಂತೆ ಮಾಡಲಾಗಿದೆ.
ಇಡೀ ಸಿನೆಮಾ ಕೊಡಗಿನ ಗೋಣಿಕೊಪ್ಪ ಸುತ್ತಾಮುತ್ತ, ಹಾಗು ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಸಿನೆಮಾಕ್ಕೆ ವುಶೇಷವಾದಂತಹ ಸೆಟ್ ಹಾಕಲಾಗಿದ್ದು, ಪಾತ್ರದಾರಿಗಳು ಏನು ಮಾಡುತ್ತುದ್ದೇವೆ. ಏನಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲ. ಸಿನೆಮಾ ಕೊನೆಯವರೆಗೂ ವೀಕ್ಷಕರಿಗೆ ಗೊಂದಲದ ಗೂಡಾಗಿ ಬಿಡುತ್ತದೆ. 
ನಿಷಿದ್ಧ ಸಿನೆಮಾದಲ್ಲಿ ಹೊಸಬರ ಪ್ರತ್ಯಕ್ಷ:
ಹೊಸ ಪ್ರತಿಭೆಗಳ *ನಿಷಿದ್ಧ* ಚಿತ್ರವು ತೆರೆಗೆ ಬರಲು ಅಣಿಯಾಗಿದೆ. ಪ್ರಚಾರದ ಕೊನೆ ಹಂತವಾಗಿ ಟ್ರೇಲರ್ ಮತ್ತು ಹಾಡು ಬಿಡುಗಡೆ ಕಾರ್ಯಕ್ರಮ ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಶ್ರೀ ಅಂಜನಿ ತನಯ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೂರ್ಗ್ ಮೂಲದ ಉದ್ಯಮಿ ಸಿ.ಬಿ.ಬೋಪಯ್ಯ (ಜಗನ್) ಬಂಡವಾಳ* ಹೂಡಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ *ಸುಸಮಯ ದಿನೇಶ್ ಬರವಣಿಗೆ ಮತ್ತು ಆಕ್ಷನ್ ಕಟ್* ಹೇಳಿದ್ದಾರೆ.
ನಾಯಕ ಅಂಜನ್ ತಮ್ಮಯ್ಯನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಯುವತಿಯರಾಗಿ ಶ್ವೇತಾಪೂಜಾರಿ ಮತ್ತು ಶೃತಿರಮೇಶ್ ನಟಿಸಿದ್ದಾರೆ. ಹೀರೋಗೆ ಮಾರ್ಗದರ್ಶನ ನೀಡುವ ಪಾತ್ರದಲ್ಲಿ ಶಿವಕುಮಾರ್ ಆರಾಧ್ಯ. ಇವರೊಂದಿಗೆ ದಿನೇಶ್.ಹೆಚ್.ಸಿ, ಲಾಲುಸಾಬ್, ಮಂಜುನಾಥ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇವರೆಲ್ಲರೂ ಸಿನೆಮಾದಲ್ಲಿ ಮಿದಲ ಭಾರಿಗೆ ಬಣ್ಣ ಹಚ್ಚಿದ್ದಾರೆ.
ಸಂಗೀತ ಮನುರಾಜ್, ಛಾಯಾಗ್ರಹಣ ನಿರಂಜನ್ ಬೋಪಣ್ಣ, ಸಂಕಲನ ಸುನಯ್.ಎಸ್.ಜೈನ್, ಸಾಹಸ ರಾಕೆಟ್ ವಿಕ್ರಂ, ನೃತ್ಯ ರಾಮುಕುಮಾರ್-ಗೌರಿಶಂಕರ್ ಅವರದಾಗಿದೆ. ಮಡಕೇರಿ, ಕುಮಟೂರು ಪುರಾತನ ಏರ್ಮಾಡು ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲಾಗಿದೆ. ನವೆಂಬರ್ 7 ರಂದು ಸಿನಿಮಾವನ್ನು ಜನರಿಗೆ ತೋರಿಸಲು ವಿತರಕ ಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ.
ಇಡೀ ಸಿನೆಮಾದ ಕಥೆ ತುಣುಕು ರೋಚಕ:
ಇದೇ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಕೆಲವೊಮ್ಮೆ ನಾವುಗಳು ಇಂತಹ ಕೆಲಸಗಳನ್ನು ಮಾಡಬಾರದು ಎಂಬ ನಿಷೇದವಿದ್ದರೂ ಹಠ ಮಾಡಿ ಅದನ್ನು ಮಾಡಲು ಹೋದಾಗ ಅವಘಡಗಳಿಗೆ ಹೇಗೆ ಸಿಲುಕುತ್ತಾರೆ?. ನಾಲ್ಕು ನಿರುದ್ಯೋಗಿ ಯುವಕರು ಇಂತಹುದೇ ವಿಷಯಗಳ ಹಿಂದೆ ಹೋದಾಗ ಕಷ್ಟಕ್ಕೆ ಸಿಲುಕುತ್ತಾರೆ. ಅದರಿಂದ ಮುಂದೆ ಅಗಬಹುದಾದ ಪರಿಣಾಮಗಳನ್ನು ಹೇಗೆ ಎದುರಿಸಬೇಕಾಗುತ್ತದೆ? ಊಹಿಸಲಾಗದ ದೃಶ್ಯಗಳು ಹಾಗೂ ಅಂದುಕೊಂಡಂತ ಸನ್ನಿವೇಶಗಳು ಬಾರದೆ ನೋಡುಗರ ಕುತೂಹಲ ಕೆರಳಿಸುತ್ತದೆ.
https://youtu.be/9H7dBIERGlA?si=B8OUajXZQMiJbQES
ಸಿನೆಮಾ ನಿರ್ಮಾಣ ಮಾಡಲು ಸಾಕಷ್ಟು ಶ್ರಮವಹಿಸಿ ಆರ್ ಆರ್ ಸಿನೆಮಾ ಮಾಡಲಾಗಿದೆ. ನವೆಂಬರ್ 7 ರಂದು ಸಿನೆಮಾ ರಿಲೀಸ್ ಆಗುತ್ತಿದ್ದು ಸಹೃದಯಿಗಳು ಥಿಯೇಟರ್ ಗೆ ಹೋಗಿ ನೋಡಲು ಮನವಿ ಮಾಡಿಕೊಂಡರು.