ಬೆಂಗಳೂರು : ಖ್ಯಾತ ಕವಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುಲೇಮಾನ್ ಖತೀಬ್ ಅವರ ಕಾವ್ಯ ಚಿಂತನೆ ಮತ್ತು ಸಾಮಾಜಿಕ ಸಂದೇಶಗಳಿಂದ ಹೆಚ್ಚು ಪ್ರೇರಣೆ ಪಡೆದ ವಿಶಿಷ್ಟ ಸಂಗೀತ ನಾಟಕ ವಿಶಿಷ್ಟ ನಾಟಕವನ್ನು ನಾಳೆ ಬೆಂಗಳೂರಿನ ಕನಕಪುರ ರಸ್ತೆಯ ಪ್ರಸ್ಪೇಜ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ತಿಳಿಸಿದರು.
ಇನ್ನು ನಾಟಕವನ್ನು ಸುಲಮಾನ್ ಕತಿಬ್ ಎಜುಕೇಶನಲ್ ಮತ್ತು ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಲಾಗಿದ್ದು, ಸುಲೈಮಾನ್ ಅವರ ಕಥೆ ಅವರ ಸಾಹಿತ್ಯಕ್ಕೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು ಅವರ ಕವನ ಸಂಕಲನವು ಈಗಾಗಲೇ 16 ಆವೃತ್ತಿಗಳನ್ನು ಕಂಡಿದೆ ಹಾಸ್ಯ ವ್ಯಂಗ್ಯ ಹಾಗೂ ಭಾವನಾತ್ಮಕ ನಿರೂಪಣೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಅವರ ಸಾಹಿತ್ಯವನ್ನು ರಂಗಭೂಮಿಯ ಮೂಲಕ ಮತ್ತಷ್ಟು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ನಾಟಕವನ್ನು ರೂಪಿಸಲಾಗಿದೆ.
ಸಾಹಿತ್ಯಕ್ಕೆ ಹೊಸ ವೇದಿಕೆ ದಖನಿ ಭಾಷೆ:
ಕೇವ್ಡೆ ಕಾ ಬನ್ ಮೂಲಕ ದಖನಿ ಉರ್ದು ಭಾಷೆ ಸಾಹಿತ್ಯ ಮತ್ತು ರಂಗಭೂಮಿಯನ್ನು ಉತ್ತೇಜಿಸುವ ಉದ್ದೇಶದಿಂದ ಗುಣಮಟ್ಟದ ಉರ್ದು ನಾಟಕ ಜಾನಪದ ಸಂಗೀತ ಹಾಗೂ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಪರಿಚಯಿಸುವ ಪ್ರಯತ್ನವು ಇದಾಗಿದ್ದು, ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಗಂಭೀರ ಸಾಮಾಜಿಕ ವಿಚಾರಗಳನ್ನು ಪ್ರೇಕ್ಷಕರ ಮುಂದಿಡುವ ನಾಟಕವು ಮನರಂಜನೆಯ ಜೊತೆಗೆ ಚಿಂತನೆಗೂ ಹೆಚ್ಚು ಅವಕಾಶವನ್ನು ಕಲ್ಪಿಸಲಿದ್ದಾರೆ.
ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು:
ಇನ್ನು ನಾಟಕದಲ್ಲಿ ಸಾಮಾಜಿಕ ಅಸಮಾನತೆ ರೈತರು ಮತ್ತು ಕಾರ್ಮಿಕರ ಸಂಕಷ್ಟ ಶೋಷಣೆ ವರದಕ್ಷಿಣೆ ಕಿರುಕುಳ ಮಹಿಳೆಯರ ಮೇಲಿನ ದೌರ್ಜನ್ಯ ನೈತಿಕ ಮೌಲ್ಯಗಳ ಕುಸಿತ ಶಿಕ್ಷಣದ ಮಹತ್ವ ಮಾನವೀಯ ಮೌಲ್ಯಗಳಂತ ಹಲವು ಪ್ರಮುಖ ವಿಚಾರಗಳನ್ನು ರಂಗಮಂಚದಲ್ಲಿ ಶತ್ರುಗಳಿಗೆ ತಿಳಿಸುವ ಪ್ರಯತ್ನ ಮಾಡಲಿದ್ದಾರೆ ಇದರ ಜೊತೆ ಸಾಮಾಜಿಕ ಸುಧಾರಣೆ, ಕೋಮು ಸೌಹಾರ್ದತೆ ದೇಶಭಕ್ತಿ ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯದ ಸಂದೇಶಗಳನ್ನು ಸಾರುವ ಪ್ರಯತ್ನವನ್ನು ಈ ನಾಟಕದ ಮೂಲಕ ಮಾಡಲಾಗುತ್ತದೆ ಎಂದರು.
ಗ್ರಾಮೀಣ ಬದುಕು ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿದ್ದರೂ ನಾಟಕದಲ್ಲಿ ಮೂಡಿ ಬರುವ ವಿಚಾರಗಳು ಎಲ್ಲಾ ವರ್ಗದ ಜನರಿಗೂ ಅನ್ವಯಿಸುವಂತಹ ಸಾರ್ವತ್ರಿಕ ಸಂದೇಶವನ್ನು ಈ ನಾಟಕ ಹೊಂದಿದೆ ಎಂದರು.
ಸುಲೇಮಾನ್ ಕತಿಬ್ ಅವರ ಸಾಹಿತ್ಯ ಆಸಕ್ತಿ:
ಸುಲೈಮಾನ್ ಖತೀಬ್ ಅವರು ದಖನಿ ಉರ್ದು ಸಾಹಿತ್ಯದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದ 1974ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅವರು ಆಸ್ತಿಯ ಬೆಂಕಿದ ಮೂಲಕ ಸಮಾಜದ ವಿವಿಧ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಜನರ ಮುಂದಿಟ್ಟಿದ್ದಾರೆ.
ಕುಟುಂಬ ಸಮೇತರಾಗಿ ನಾಟಕ ವೀಕ್ಷಣೆ:
ಇನ್ನು ಕೇವ್ಡೆ ಕಾ ಬನ್ ನಾಟಕವು ಕುಟುಂಬ ಸಮೇತರಾಗಿ ನೋಡುವಂತಹ ಹಾಸ್ಯ ಭರಿತ ವ್ಯಂಗ್ಯ ಭಾವನೆ ಸಂಗೀತ ಹಾಗೂ ಜಾನಪದ ಕಲೆಯ ಸೊಗಡಿನೊಂದಿಗೆ ಮೂಡಿಬರುವಂತಹ ವಿಶೇಷವಾದಂತಹ ನಾಟಕ ಇದಾಗಿದ್ದು ಎಲ್ಲಾ ವಯೋಮಾನದ ಪ್ರೇಕ್ಷಕರಿಗೂ ಅರ್ಥವಾಗುವ ಸಾಂಸ್ಕೃತಿಕ ಅನುಭವವನ್ನು ಗುಣಪಡಿಸುವ ಉದ್ದೇಶವನ್ನು ಈ ನಾಟಕದಲ್ಲಿ ಒಂದಾಗಿದೆ.
ಸುಲೇಮಾನ್ ಖತೀಬ್ ಅವರ ಸಾಹಿತ್ಯದ ಮೂಲ ಆಶಯಗಳನ್ನು ಸಾಧ್ಯವಾದಷ್ಟು ಉಳಿಸಿಕೊಡುವ ಸಮಕಾಲೀನ ಪ್ರೇಕ್ಷಕರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ರಂಗ ರೂಪ ನೀಡಲಾಗಿದೆ ಹೀಗಾಗಿ ದಖನಿ ಭಾಷೆಯ ಸೊಗಡಿನೊಂದಿಗೆ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ.
ಸಾಹಿತ್ಯದ ಸೊಗಡು ಸಂಗೀತದ ಮಧುರತೆ ಹಾಸ್ಯದ ಲವಲವಿಕೆ ಮತ್ತು ಸಾಮಾಜಿಕ ಸಂದೇಶವನ್ನು ಸಾರುವ ಹಾಗೂ ವೇದಿಕೆಯಲ್ಲಿ ಕಟ್ಟಿಕೊಡುವ ಕೇವ್ಡೆ ಕಾ ಬನ್ ಸುಲೇಮಾನ್ ಖತೀರ ಅಮೂಲ್ಯ ಸಾಹಿತ್ಯದ ಪರಂಪರೆಗೆ ಸಲ್ಲಿಸುವ ವಿಶೇಷ ಗೌರವ ಇದಾಗಿದೆ ಎಂದರು.