ಬೆಂಗಳೂರು: ಚರ್ಮದ ಚಿಕಿತ್ಸೆ ಹಾಗೂ ಜಾಗತಿಕ ತಂತ್ರಜ್ಞಾನಗಳೊಂದಿಗೆ ಚರ್ಮ ಮತ್ತು ಸೌಂದರ್ಯ ಆರೈಕೆಯನ್ನು ಒದಗಿಸುವಲ್ಲಿ ವೀಕೇರ್ ಸನ್ನದವಾಗಿದೆ ಎಂದು ನಟಿ , ರೂಪದರ್ಶಿ ಪ್ರಿಯಾ ಆನಂದ್ ತಿಳಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿ ವೀಕೇರ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್ ಗೆ ಚಾಲನೆ ನೀಡಿದರು. ನಂತರ ಮಾತನಾಡಿ, ಎಲ್ಲರಿಗೂ ಸೌಂದರ್ಯವಾಗಿರಲು ಬಯಸುತ್ತಾರೆ. ಅದಕ್ಕೆ ವೀಕೇರ್ ಕ್ಲಿನಿಕ್ ನಲ್ಲಿ ಗುಣಮಟ್ಟದಲ್ಲಿ ಚರ್ಮದ ಆರೈಕೆಯಲ್ಲಿ ಮೇಲುಗೈಸಾಧಿಸಿದೆ. ಕೋರಿಯನ್ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ವೀಕೇರ್ ಚಿಕಿತ್ಸೆಯಲ್ಲಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಎಂದರು.
ಎಲ್ಲರಿಗೂ ಅವರದ್ದೇ ಆದ ಸೌಂದರ್ಯ ಚೆನ್ನಾಗಿರಲು ಬಯಸುತ್ತಾರೆ, ಅದೇ ರೀತಿ ಕನ್ನಡಿ ಮುಂದೆ ನಿಂತಾಗ ಕಾಸ್ಮೆಟಿಕ್ ನ ಗುಣಮಟ್ಟ, ಯಾವುದೇ ಅಡ್ಡ ಪರಿಣಾಮವಿಲ್ಲದೆ ಇದ್ದರೆ ಆರೋಗ್ಯದಿಂದ ಸುಂದರವಾಗಿ ಕಾಣಲು ಸಾಧ್ಯವಾಗುತ್ತದೆ. ಒಂದೇ ದಿನದಲ್ಲಿ ಫೇಶಿಯಲ್ ಆರ್ಕಿಟೆಕ್ಚರ್ ಮಾಡುವ ಗುಟ್ಟನ್ನು ಬೆಂಗಳೂರಿನಲ್ಲಿ ಕೇಂದ್ರ ತೆರೆಯಲಾಗಿದೆ ಎಂದರು.
ವೀಕೇರ್ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಕುಂದನ್ ಸತ್ಯನಾರಾಯಣ ಮಾತನಾಡಿ, ಸೌಂದರ್ಯದಲ್ಲಿ ಜಾಗತಿಕವಾಗಿ ವಿಕಾಸಗೊಳ್ಳುತ್ತಿವೆ. ಹೊಸ ಹೊಸ ತಂತ್ರಜ್ಞಾನದ ಜೊತೆ ಬೆಳೆಯುತ್ತಿದ್ದೇವೆ. Centar Of Exelance ಕೇಂದ್ರ ಚಿಕಿತ್ಸೆಗಳನ್ನು ಮೀರಿದ, ವಿವಿಧ ಆಯಾಮದಲ್ಲಿ ಚರ್ಮದ ಆರೈಕೆಯನ್ನು ಮಾಡಲಿದೆ ಎಂದರು. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಸೂಕ್ತ ಪರೀಕ್ಷೆಗಳ ಮೂಲಕ ಸೂಕ್ತ ತ್ವಚೆಯ ಸಂದರ್ಯ ಕಾಣುವಂತೆ ಆರೈಕೆ ಮಾಡಲು ಸಾದ್ಯವಾಗುತ್ತದೆ ಎಂದರು.
ಹೈದರಾಬಾದ್ ಬೆಂಗಳೂರು ವಿಸ್ತರಣೆ ಯೊಂದಿಗೆ ದಕ್ಷಿಣ ಭಾರತದ ಮಹಾನಗರಗಳಲ್ಲಿ ತನ್ನ ಅಸ್ತಿತ್ವ ಬಲಪಡಿಸಲು ದಿಟ್ಟ ಹೆಜ್ಜೆಯನ್ನು ವೀಕೇರ್ ಇಟ್ಟಿದೆ. ವಿಶ್ವ ದರ್ಜೆಯ ಕೊರಿಯನ್ ಪ್ರೇರಿತ ಸೌಂದರ್ಯದ ಆರೈಕೆ ನೀಡಲಿದೆ. ಮೂರು ಆಯಾಮದ ವಿಧಾನಗಳೊಂದಿಗೆ 7 ಸುಧಾರಿತ ಲೇಸರ್ ತಂತ್ರಜ್ಞಾನ ಬಳಸಿಕೊಂಡು 90 ದಿನಗಳಲ್ಲಿ ಅತ್ಯಾಧುನಿಕ ಫಲಿತಾಂಶ ನೀಡಲಿದೆ ಎಂದರು.
ವೀಕೇರ್ ಗ್ರೂಪ್ ನ ಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕಿ, ಭಾರತದ ಮೊದಲ ಮಹಿಳಾ ಟ್ರೈಕಾಲಾಜಿಸ್ಟ್ ಇ ಕ್ಯಾರೋಲಿನ್ ಪ್ರಭಾ ಮಾತನಾಡಿ,ಭಾರತದಾಧ್ಯಂತ ಸುಮಾರು 80ಕ್ಕಿಂತ ಅಧಿಕ ಚರ್ಮ ಚಿಕಿತ್ಸಾಲಯಗಳನ್ನು ಪ್ರಾರಂಭಿಸಿ ಮುನ್ನೆಡೆಸುತ್ತಿದ್ದಾರೆ. ಸಂಸ್ಥೆಯ ಎಲ್ಲಾ ಮುಖ್ಯಸ್ಥರೊಂದಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ನಾವು ಪರಿಚಯಿಸುವ ಪ್ರತಿಯೊಂದು ತಂತ್ರಜ್ಞಾನವು ಜಾಗತಿಕ ವೈದ್ಯಕೀಯ ಮೌಲ್ಯಮಾಪನದಿಂದ ಅಂಗೀಕರಿಸಲಾಗಿದೆ. FDA ಕ್ಲಿಯರೆನ್ಸ್ ಮತ್ತು ಖಚಿತ ಫಲಿತಾಂಶ ಹೊಂದಿದೆ. ಭಾರತದ ಮೊದಲ AI ಚಾಲಿತ 3D ಚರ್ಮದ ವಿಶ್ಲೇಷಣೆ,ಚಿತ್ರೀಕರಣ, ಮುನ್ಸೂಚನೆ, ಭವಿಷ್ಯದ ಚರ್ಮದ ಸಿಮ್ಯುಲೇಷನ್ ನೀಡುತ್ತಿದೆ.
ವೀಕೇರ್ ಭಾರತದ ಪ್ರಮುಖ ಸೌಂದರ್ಯ ಮತ್ತು ಟ್ರೈಕಾಲಜಿ ಬ್ರಾಂಡ್ , ಚರ್ಮ,ಕೂದಲು,ಸೌಂದರ್ಯ ಚಿಕಿತ್ಸೆಗಳಲ್ಲಿ ವೈದ್ಯಕೀಯ ಪರಿಣತಿ,ಅತ್ಯಾಧುನಿಕ ಅಂತರಾಷ್ಟ್ರೀಯ ತಂತ್ರಜ್ಞಾನಗಳನ್ನು ಮತ್ತು ವೈಯಕ್ತಿಕಗೊಳಿಸಲು ಆರೈಕೆಯಿಂದ ಜನಮನ್ನಣೆಗೊಳಿಸಲಾಗಿದೆ.
ವೀಕೇರ್ ನಿಂದ ನೀಡುವ ಸೌಲಭ್ಯಗಳು:
ಡರ್ಮ ಸ್ಕ್ಯಾನ್ DSM-4 ಕೊಲೊರಿಮೀಟರ್ ಮಾಪನ, ಇನ್ಮೋಡ್ ನಿಂದ ಟ್ರೈಟಾನ್ ಪ್ಲಾಟ್ ಫಾರ್ಮ್ ,ಆಲ್ಮ ಹಾರ್ಮೊನಿ PRO, ಜೀಸಿಸ್ ನಿಂದ ಡೆನ್ ಸಿಟಿ ಆರ್ ಎಫ್,ಲೂಟ್ರಾನಿಕ್ ನಿಂದ ಹಾಲಿವುಡ್ ಸ್ಪೆಕ್ಟ್ರಾ , ಜೀಸಿಸ್ ನಿಂದ ಅಲ್ಟ್ರಾ ಸೆಲ್ Q+, ಪರ್ಫಾಕ್ಷನ್ ನಿಂದ ಎನರ್ಜೆಟ್, ಹೀಗೆ ಹತ್ತು ಹಲವು ವಿಧಾನಗಳ ಮೂಲಕ ಚಿಕಿತ್ಸೆ ದೊರೆಯಲಿದೆ.
ನೂತನ ವೀಕೇರ್ ಕೇಂದ್ರ ಉದ್ಘಾಟನೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕರು, ಚರ್ಮ ವೈದ್ಯರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.