LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ʼರಸಾರಾಧನಂʼನಲ್ಲಿ ನಿರುಪಮಾ ರಾಜೇಂದ್ರ ಅನನ್ಯ ಹೆಜ್ಜೆಗಳು

ಬೆಂಗಳೂರು: ಶಿವನ ಓಲೈಕೆಗೆ ಸರ್ವ ಋತುಗಳಲ್ಲಿ ಪಾರ್ವತಿಯ ತಪಸ್ಸು, ಅವಳ ಆತ್ಮ ಸೌಂದರ್ಯದ ಪ್ರೀತಿಗೆ ಹೃದಯಭಾಗವನ್ನೇ ನೀಡಿ ಅರ್ಧನಾರೀಶ್ವರನಾಗುವ ಶಿವ… ನೃತ್ಯಾಂಜಲಿಯಲ್ಲಿ ಮೂಡಿ ಬಂದ ಪ್ರಕೃತಿ, ನವಿಲು, ಕೃಷ್ಣ… ಹರಿ ಮತ್ತು ಹರ ತಮ್ಮ ಶಕ್ತಿಗಳ ಬಗ್ಗೆ ಪರಸ್ಪರ ಪ್ರಶಂಸಿಸಿಕೊಂಡು ತಾವು ಅಭೇದ ಎಂಬುದನ್ನು ತೋರಿಸಿಕೊಟ್ಟ ಬಗೆ… 
 ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದೆ ನಿರುಪಮಾ ರಾಜೇಂದ್ರ ಅವರು ತಮ್ಮ ಅಭಿನವ ಡ್ಯಾನ್ಸ್ ಕಂಪನಿ ವತಿಯಿಂದ ಪದ್ಮಭೂಷಣ ಶತಾವಧಾನಿ ಡಾ.ಆರ್‌. ಗಣೇಶ್‌ ಅವರ ಕೃತಿಗಳಿಗೆ ನಗರದ ದೊಡ್ಡಕಲ್ಲಸಂದ್ರದ ಮೀನಾಕ್ಷಿ ರಂಗಮಂಚದಲ್ಲಿ ಪ್ರದರ್ಶಿಸಿದ  ಏಕವ್ಯಕ್ತಿ ಶಾಸ್ತ್ರೀಯ ನೃತ್ಯ ಗೌರವ ʼರಸಾರಾಧನಂʼನ ಝಲಕ್‌. 
ಕಾಳಿಂಗ ಮರ್ದನದ ದೃಶ್ಯ ನಿರೂಪಿಸುವಾಗ ಹೆಡೆಗಳ ಮೇಲೆ ಜಾರುವ ಕೃಷ್ಣನ ಕಾಲುಗಳು, ತುಂಬಿ ಹರಿಯುವ ಗಂಗೆ, ಯಮುನೆ, ಬೀಸುವ ಗಾಳಿ ಹೀಗೆ ಎಲ್ಲ ಒಂದಲ್ಲ ಒಂದು ವಸ್ತು, ವಿಷಯ ನಿರೂಪಿಸುವಾಗ ಕ್ಷಣ ಮಾತ್ರದಲ್ಲಾಗುವ ಅಭಿವ್ಯಕ್ತಿ ಪರಿವರ್ತನೆ ನಿರುಪಮಾ ಅವರ ಹೆಜ್ಜೆಗಳಲ್ಲಿ ಮೂಡಿ ಬಂದವು. ಸ್ಪುಟವಾದ ಸಂಗೀತ, ಬೆಳಕುಗಳ ನಿಖರ ಕೋನಗಳು ಮತ್ತು ವರ್ಣ ಪಲ್ಲಟ ವೇದಿಕೆಯಲ್ಲಿ ಪುರಾಣ, ದೈವಿಕತೆಯ ಕಾಲಘಟ್ಟದ ಲೋಕ ಸೃಷ್ಟಿಸಿದವು.
ʼದೌತ್ಯ ದೀಕ್ಷಿತೆʼ ಕೃತಿಯ ಪ್ರಸ್ತುತಿಯಲ್ಲಿ ನಾಯಕಿಯು ದೂರವಿರುವ ತನ್ನ ಗಂಡನಿಗೆ ಸಂದೇಶ ಕಳುಹಿಸಲು ಎಲ್ಲ ಮಾರ್ಗಗಳು ಸರಿಹೊಂದದೇ ಹೋದಾಗ ತನ್ನ ಮನಸ್ಸನ್ನೇ ಕಳುಹಿಸುವ ಪರಿ ಅಪರೂಪವಾದದ್ದು. ಈ ಪ್ರಸ್ತುತಿಯಲ್ಲಿ ಮೋಡ, ಹುಣ್ಣಿಮೆಯ ಚಂದ್ರ, ನವಿಲು, ಗಿಳಿ, ಗಾಳಿ… ಹಾದು ಹೋದವು. 
ಕಿಕ್ಕಿರಿದ ಸಭಾಂಗಣದಲ್ಲಿ ಪ್ರತಿ ಪ್ರದರ್ಶನಕ್ಕೂ ಪ್ರೇಕ್ಷಕರ ಕರತಾಡನ ಪ್ರಶಂಸೆಯ ಪರಾಕಾಷ್ಠೆಯನ್ನು ತೋರಿಸಿತು,
ಡಾ.ಆರ್‌. ಗಣೇಶ್‌ ಮಾತನಾಡಿ, ʼನಿರುಪಮಾ ಅವರ ಶ್ರದ್ಧೆ, ಆಸ್ಥೆ ಅದ್ಭುತವಾದದ್ದು. ಅವರು ಅದ್ಭುತ ಪರಿವರ್ತಕರು. ಪ್ರದರ್ಶನದ ವೇಳೆಯಲ್ಲೇ ಮಾಡುವ ಪ್ರಸ್ತುತಿಯ ಸುಧಾರಣೆಗಳು ವಿಶೇಷ. ಶೃಂಗಾರ ರಸವನ್ನು ಸರಿಯಾಗಿ ಅಭಿವ್ಯಕ್ತಪಡಿಸಲು ಬರಬೇಕು. ಆಗ ಭರತ ನಾಟ್ಯ ಎಂಬ ಹೆಸರು ಅರ್ಥಪೂರ್ಣ. ಗುಂಪು ನೃತ್ಯಗಳ ಬದಲಿಗೆ ಇಂಥಹ ಏಕವ್ಯಕ್ತಿ ಪ್ರದರ್ಶನಗಳು ಹೆಚ್ಚು ನಡೆಯಬೇಕುʼ ಎಂದರು.
ಸಂಗೀತ ವಿದುಷಿ ಎಂ.ಎಸ್‌. ಶೀಲಾ, ʼನಿರುಪಮಾ ಅವರು ಅಭಿನಯ ಶಾರದೆಯಾಗಿದ್ದಾರೆ. ಅವರ ಕಲಾರಾಧನೆ ನಿರಂತರವಾಗಿ ಮುಂದುವರಿಯಲಿʼ ಎಂದು ಆಶಿಸಿದರು. ನಿರುಪಮಾ ಅವರ ಪತಿ ರಾಜೇಂದ್ರ, ಕುಮಾರನ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ದೀಪಾ ಶ್ರೀಧರ್‌ ಉಪಸ್ಥಿತರಿದ್ದರು.
ಹಿನ್ನೆಲೆಯಲ್ಲಿ ರಘುರಾಮ್ ರಾಜಗೋಪಾಲನ್ (ಗಾಯನ), ಮಹೇಶ್ ಸ್ವಾಮಿ (ಕೊಳಲು), ಪ್ರಶಾಂತ್ ರುದ್ರಪಟ್ಟಣ(ವೀಣೆ), ಶ್ರೀನಿಧಿ ಮಾಥುರ್(ವಯೋಲಿನ್),  ಪ್ರಸನ್ನಕುಮಾರ್ ( ತಾಳವಾದ್ಯ ಮತ್ತು ನಟುವಾಂಗ), ವಿದ್ಯಾಶಂಕರ್ (ಮೃದಂಗ) ಸಾಥ್ ನೀಡಿದರು. ಕಶ್ಯಪ್‌ ನಾಯಕ್‌ ಮತ್ತು ಅರ್ಜುನ್‌ ಭಾರಾದ್ವಾಜ್‌ ನಿರೂಪಿಸಿದರು.
Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗೌ.ಡಾಕ್ಟರೇಟ್ ಸ್ವೀಕರಿಸಿದ ಉಪ ವಲಯ ಅರಣ್ಯಧಿಕಾರಿ ಚಂದ್ರಕುಮಾರ್ ಆರ್ ಅವರಿಗೆ ಅಭಿನಂದನೆಗಳು  ಮೂಲಸೌಕರ್ಯ, ಸಬ್ಸಿಡಿ ಸೇರಿ ಹಲವು ಬೇಡಿಕೆ ಈಡೇರಿಕೆ ಕುರಿತು ಉದ್ಯಮಿಗಳ ನಿಯೋಗದೊಂದಿಗೆ ಸಚಿವ ವಿಜಯಾನಂದ ಕಾಶಪ್ಪನವರ್‌ ಸಭೆಸರಳ, ವೇಗದ, ಪಾರದರ್ಶಕ ಮತ್ತು ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ‘ಇ-ಆಸ್ತಿ 2.0’ : ಕೃಷ್ಣ ಬೈರೇಗೌಡಕಸ್ತೂರಿರಂಗನ್ ವರದಿ ಗದ್ದಲ:ಅರಣ್ಯ ಸಚಿವರು ಉತ್ತಮ ನಿರ್ಣಯ ಕೈಗೊಂಡಿದ್ದಾರೆರಾಜ್ಯದ ಅಭಿವೃದ್ಧಿಗೆ   ಆರ್.ಅಶೋಕ್ ಅಡ್ಡಗಾಲು,ಪ್ರತಾಪ್ ಸಿಂಹ ದಲಿತ ವಿರೋಧಿ ವಿರುದ್ದ ಕಾಂಗ್ರೆಸ್ ನಿಂದ ಪ್ರತಿಭಟನೆಕಸ್ತೂರಿ ರಂಗನ್ ವರದಿ ಮುಂದಿಟ್ಟುಕೊಂಡು ಮಲೆನಾಡಿನ ರೈತರ ಬದುಕು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಮಧು ಬಂಗಾರಪ್ಪ ಹಿರಣ್ಯಾಕ್ಷ'ನ ಪಾಪದ ಕೊಡ ತುಂಬುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಸೆ.28 ರಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ರೈತ ಸ್ವಾಭಿಮಾನ ಯಾತ್ರೆ' - ಪ್ರತಿ ಜಿಲ್ಲೆಗೂ ಪ್ರವಾಸಏರ್‌ಟೆಲ್ ಪೋಸ್ಟ್‌ ಪೇಯ್ಡ್ ಗ್ರಾಹಕರಿಗೆ ಬಂಪರ್ ಕೊಡುಗೆಗೌತಮ ಬುದ್ಧನ ಧ್ಯಾನ ತಂತ್ರಗಳ ಕುರಿತು ಸಂಶೋಧನೆ: ಭೀಮರಾಯ ಅವರಿಗೆ ಪಿಎಚ್.ಡಿ. ಪದವಿ