ಬೆಂಗಳೂರು: ಕೇಶವ ನೃತ್ಯ ಶಾಲಾ ಹಾಗೂ ಅಭಿವ್ಯಕ್ತಿ ಕಲ್ಚರಲ್ ಟ್ರಸ್ಟ್ ನಲ್ಲಿ ಭರತನಾಟ್ಯ ಕಲಾವಿದೆಯಾಗಿ ಕಲಿತ ಕುಮಾರಿ ವಿದುಷಿ ತುಳಸಿಯವರು ಅದ್ದೂರಿಯಾಗಿ ಭರತನಾಟ್ಯ ರಂಗ ಪ್ರವೇಶ ಮಾಡಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಕಲಾಯೋಗಿ ಗುರು ವಿದ್ವಾನ್ ರಘುನಂದನ್ ಅವರ ಗರಡಿಯಲ್ಲಿ ಬೆಳೆದ ವಿದೂಷಿ ತುಳಸಿ ಅವರು ಸುಮಾರು ಐದರಿಂದ ಆರು ವರ್ಷಗಳ ಕಾಲ ಭರತನಾಟ್ಯದಲ್ಲಿ ವಿಶೇಷ ಪಾಂಡಿತ್ಯ ಪಡೆದು ಶುಕ್ರವಾರ ಸಂಜೆ ಅದ್ದೂರಿಯಾಗಿ ಗುರುಗಳ ಸಮಕ್ಷಮದಲ್ಲಿ ಭರತನಾಟ್ಯ ರಂಗ ಪ್ರವೇಶ ಮಾಡಿದರು.
ಸತತ ನಾಲ್ಕು ಗಂಟೆಗಳ ಕಾಲ ಭರತನಾಟ್ಯದ ವಿವಿಧ ಪ್ರಕಾರಗಳಲ್ಲಿ ವೇದಿಕೆ ಮೇಲೆ ನೃತ್ಯವನ್ನು ತುಳಸಿಯವರು ನಿರಂತರವಾಗಿ ಮಾಡುವ ಮೂಲಕ ಭರತನಾಟ್ಯ ರಂಗ ಪ್ರವೇಶ ಮಾಡಿದರು. ಒಟ್ಟು ಭರತನಾಟ್ಯದ ಒಂಬತ್ತು ಪ್ರಕಾರಗಳ ನೃತ್ಯವನ್ನು ಒಂದೇ ವೇದಿಕೆಯಲ್ಲಿ ಏಕವ್ಯಕ್ತಿಯಾಗಿ ಮಾಡುವ ಮೂಲಕ ನೆರೆದಿದ್ದವರನ್ನು ಪುಳಕಿತರನ್ನಾಗಿ ತುಳಸಿ ಅವರು ಮಾಡಿದ್ದಾರೆ. 
ವಿದುಷಿ ತುಳಸಿಯವರ ಭರತನಾಟ್ಯ ರಂಗ ಪ್ರವೇಶಕ್ಕೆ ಆದಿಚುಂಚನಗಿರಿಯ ಪೀಠಾಧೀಶರಾದ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪದ್ಮಶ್ರೀ ಪುರಸ್ಕೃತ ಸುಶೀಲಮ್ಮ ಸೇರಿದಂತೆ ಗುರುಗಳು, ಅನೇಕ ಭರತನಾಟ್ಯ ಹೆಸರಾಂತ ಕಲಾವಿದರು, ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದುಷಿ ತುಳಸಿಯವರ ರಂಗ ಪ್ರವೇಶಕ್ಕೆ ಆಶೀರ್ವಾದ ಮಾಡಿದರು.
ಇನ್ನೂ ತುಳಸಿಯವರ ತಂದೆ ನಾರಾಯಣ ಹಾಗೂ ತಾಯಿ, ಸುಜಾತ ಅವರ ಪುತ್ರಿ ಬಾಲಗಂಗಾಧರನಾಥ ಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದು ಅದರ ಜೊತೆಗೆ ಕಲೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇನ್ನು ತುಳಸಿಯವರ ಭರತನಾಟ್ಯ ರಂಗ ಪ್ರವೇಶಕ್ಕೆ ಸ್ನೇಹಿತರು, ವಿದ್ಯಾರ್ಥಿಗಳು ಅಪಾರವಾದಂತ ಬಂಧು ಬಳಗ ಉಪಸ್ಥಿತರಿದ್ದರು.