LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀನಗರ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಕನ್ನಡ ಹಬ್ಬ ಆಚರಣೆ

ಬೆಂಗಳೂರು:  ಶ್ರೀನಗರ ನಾಗರಿಕರ ಹಿತರಕ್ಷಣ ವೇದಿಕೆ ಇಂದ ಎರಡನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.news_1794145937_3_167.webp

ಇನ್ನು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆಯ ತನಕ ವಿವಿಧ ಕಾರ್ಯಕ್ರಮಗಳನ್ನು ಹಿತ ರಕ್ಷಣಾ ವೇದಿಕೆಯಿಂದ ಹಮ್ಮಿಕೊಳ್ಳಲಾಗಿತ್ತು, ಶ್ರೀನಗರ ಬಸ್ ನಿಲ್ದಾಣದಲ್ಲಿರುವ ವೇದಿಕೆ ಕಚೇರಿ ಉದ್ಘಾಟನೆ ಹಾಗೂ ಧ್ವಜಾರೋಹಣವನ್ನು ಹಮ್ಮಿಕೊಳ್ಳಲಾಗಿತ್ತು ಅಲ್ಲದೆ ಅನ್ನದಾನವನ್ನು ಸಹ ಸಾರ್ವಜನಿಕರಿಗೆ ವಿತರಿಸಲಾಯಿತು.

ಇನ್ನು ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ನಾಯಕರು ಆಗಮಿಸಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದ ಸಂಜೆತನಕ ಸಾಂಗವಾಗಿ ನಡೆದವು, ಇನ್ನು ಗಣ್ಯರಿಂದ ತಾಯಿ ಭುವನೇಶ್ವರಿಗೆ ಪುಷ್ಪ ನಮನವನ್ನು ಸಲ್ಲಿಸಲಾಯಿತು. ಇನ್ನು ಸಂಜೆ 6:00ಗೆ ರಸಮಂಜರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು, ಕನ್ನಡದ ಹಾಡುಗಳು ಮೇಳೈಸಿದವು.news_1794145937_2_935.webp

ಇನ್ನು ಸಂಜೆಯ ಕಾರ್ಯಕ್ರಮಕ್ಕೆ ಮಾಜಿ ಸಂಸತ್ದ ಸದಸ್ಯ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಟಿಎ ಶರವಣ ಅವರು ಭಾಗವಹಿಸಿದ್ದರು. 

ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಶಿವರಾಮೇಗೌಡ ಮಾತನಾಡಿ, ಶ್ರೀನಗರ ನಾಗರೀಕರ ಹಿತರಕ್ಷಣಾ ವೇದಿಕೆಯಿಂದ ಅದ್ದೂರಿಯಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಿದ್ದಾರೆ ಕನ್ನಡದ ಹಬ್ಬವನ್ನು ಇಷ್ಟುದ್ದಕ್ಕೆ ಪ್ರಮಾಣದಲ್ಲಿ ರಜದ ಉದ್ದಗಲಕ್ಕೂ ಸಹ ನವೆಂಬರ್ ನಲ್ಲಿ ಮಾಡುವ ವಾಡಿಕೆ ಇದೆ ಅದೇ ರೀತಿ ವೇದಿಕೆಯಿಂದಲೂ ಸಹ ಅದ್ದೂರಿಯಾಗಿ ಆಚರಣೆ ಮಾಡಿದರು. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯ ಎಂದು ತಿಳಿಸಿದರು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಕನ್ನಡದ ಬಗ್ಗೆ ನಡೆಯಲಿ ಎಂದು ತಿಳಿಸಿದರು.

ಟಿ ಎ ಶರವಣ ಮಾತನಾಡಿ, ಕನ್ನಡ ನಾಡಿಗೆ ಕನ್ನಡ ಭಾಷೆಗೆ ಸಾಕಷ್ಟು ಎರಡು ಮೂರು ಸಾವಿರ ಇತಿಹಾಸವಿದೆ ಹೀಗಾಗಿ ನಮ್ಮ ಕನ್ನಡದ ಕಂಪನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ರಾಜ್ಯದವರು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಕನ್ನಡದ ಕಟ್ಟಾಳುಗಳು ಕನ್ನಡಕ್ಕೆ ಸಂಬಂಧಿಸಿದಂತೆ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.  ಶ್ರೀನಗರ ನಾಗರಿಕರ ಹಿತರಕ್ಷಣಾ ವೇದಿಕೆ ಅಂತಹ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತದೆ ಇಂತಹ ಕೆಲಸಗಳನ್ನು ಮಾಡಲು ಮತ್ತಷ್ಟು ಶಕ್ತಿ ಆ ತಾಯಿ ಭುವನೇಶ್ವರಿ ನೀಡಲಿ ಎಂದು ಶುಭ ಹಾರೈಸಿದರು.news_1794145936_0_622.webp

ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಕನ್ನಡ ಹಬ್ಬದಲ್ಲಿ ಶ್ರೀನಗರ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶಿವನಂಜಪ್ಪ ದಾಸೇಗೌಡ ಕಾರ್ಯಾಧ್ಯಕ್ಷ, ವೆಂಕಟೇಶ್ ಪ್ರಧಾನ ಕಾರ್ಯದರ್ಶಿ ರಾಮಮೂರ್ತಿ ಉಪಾಧ್ಯಕ್ಷರು ಸೇರಿದಂತೆ ವೇದಿಕೆಯ 18 ಜನ ಪದಾಧಿಕಾರಿಗಳು ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಅಲ್ಲದೆ ಖಜಾಂಚಿ ಲಕ್ಕಪರಿತೋಷದಕರು ನಿರ್ದೇಶಕರು ಹಾಗೂ ಜಂಟಿ ಕಾರ್ಯದರ್ಶಿಗಳು ಸೇರಿದಂತೆ ಅನೇಕ ಕನ್ನಡದ ಕಟ್ಟಾಳುಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಮಾಜವನ್ನು ಸದ್ಗುಣದತ್ತ ಮುನ್ನಡೆಸುವ ಮಾತಾ ಅಮೃತಾನಂದಮಯಿ:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘನೆಶ್ರೀನಗರ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಕನ್ನಡ ಹಬ್ಬ ಆಚರಣೆಅದ್ದೂರಿಯಾಗಿ ಭರತನಾಟ್ಯ ರಂಗ ಪ್ರವೇಶ ಮಾಡಿದ ವಿದುಷಿ ತುಳಸಿಸ್ಟಾರ್ ಸುವರ್ಣ ವಾಹಿನಿಯಲ್ಲಿ ಓ ಮನಸೇ ಧಾರಾವಾಹಿ ನವಂಬರ್ 10 ರಿಂದ ಪ್ರತಿ ದಿನ 8:30 ಕ್ಕೆಪ್ರಿಸ್ಕೂಲ್ ಉಳಿಸಿ ಮಹಿಳೆಯರ ಜೀವನೋಪಾಯ ರಕ್ಷಿತ್ ಆಂದೋಲನಬೆಂಗಳೂರಿನಲ್ಲಿ ಪ್ಯೂರ್‌ಪವರ್ (PuREPower) ಹಾಜರಾತಿ ವಿಸ್ತರಣೆನ5ಕ್ಕೆ ಎಸ್ಐಆರ್ ಪ್ರಕ್ರಿಯೆ ಜ್ಞಾನೇಶ್ ಕುಮಾರ್ ವಿರುದ್ಧ ಬೃಹತ್ ಪ್ರತಿಭಟನೆಮೋದಿ, ಜ್ಞಾನೇಶ್ ಕುಮಾರ್ ಅವರನ್ನು ಹೊರಹಾಕಲು ವಿರೋಧ ಪಕ್ಷದ ನಾಯಕರ ಕಹಳೆಮೋದಿ, ಜ್ಞಾನೇಶ್ ಕುಮಾರ್ ಅವರನ್ನು ಹೊರಹಾಕಲು ವಿರೋಧ ಪಕ್ಷದ ನಾಯಕರ ಕಹಳೆಕನ್ನಡ ರಾಜ್ಯೋತ್ಸವಕ್ಕೆ :'hmt ಕನ್ನಡಿಗ' ನೂತನ ಕೈ ಗಡಿಯಾರಗಳನ್ನು ರಾಜ್ಯಕ್ಕೆ HDK  ಸಮರ್ಪಣೆ