LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!

   ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ನೇತೃತ್ವದಲ್ಲಿ ಹರಿದ ಸಂಗೀತ ಸುಧೆ •    ಪರಮ್‌ ಫೌಂಡೇಶನ್‌, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್ ಸಹಯೋಗ •    ಭಾವಗೀತೆ, ಚಿತ್ರಗೀತೆಗಳ ವಿಶಿಷ್ಟ ವಿಶ್ಲೇಷಣೆ ಹಾಗೂ ರಸಮಯ ಸಂವಾದ •    ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಅವರ ಆಕರ್ಷಕ ಕಥಾನಕ, ಒಳನೋಟ •    ಶ್ರೀನಿವಾಸ್ ಆಚಾರ್, ಪ್ರವೀಣ್ ಡಿ. ರಾವ್ ಸೇರಿದಂತೆ ಖ್ಯಾತ ವಾದ್ಯವೃಂದದ ಜುಗಲ್‌ಬಂದಿ

ಬೆಂಗಳೂರು : ರಾಜಧಾನಿಯ ಸಾಂಸ್ಕೃತಿಕ ವಲಯದಲ್ಲಿ  ʻರಸಂʼ(RaSam)* ಎಂಬ ವಿಶಿಷ್ಟ ಸಂಗೀತ ಮತ್ತು ಸಂವಾದದ ಕಾರ್ಯಕ್ರಮವು  ಜಯನಗರದ ಯುವಪಥ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಭಾರತೀಯ ಸಂಗೀತದ ವಿವಿಧ ಆಯಾಮ ಹಾಗೂ ರುಚಿಗಳನ್ನು ಪ್ರೇಕ್ಷಕರಿಗೆ ಉಣಬಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಂಗೀತ ಸಂಜೆಯಲ್ಲಿ ಸೇರಿದ್ದ ನೂರಾರು ರಸಿಕರ ಮನಗೆದ್ದಿತು.

 ಪರಮ್‌ ಫೌಂಡೇಶನ್‌, ಯುವಪಥ ಮತ್ತು ವಿಪಿ ಕಲ್ಚರ್ ಕ್ಲಬ್* ಸಹಯೋಗದಲ್ಲಿ ನಡೆದ ಈ ಅಪರೂಪದ ಗಾನ ವೈಭವವು ನಗರದ ಸಂಗೀತಪ್ರೇಮಿಗಳಿಗೆ ಒಂದು ಮರೆಯಲಾಗದ ಸಾಂಸ್ಕೃತಿಕ ರಸದೌತಣ ನೀಡಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಮತ್ತು ವಿದ್ವಾಂಸ ಜಗದೀಶ್ ಶರ್ಮಾ ಸಂಪಾ ಅವರ ಜಂಟಿ ಪ್ರಸ್ತುತಿಯಲ್ಲಿ ಮೂಡಿಬಂದ ಈ ಕಾರ್ಯಕ್ರಮವು, ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದಿಂದ ಹಿಡಿದು ಸುಗಮ ಸಂಗೀತ ಹಾಗೂ ಜನಪ್ರಿಯ ಚಲನಚಿತ್ರ ಗೀತೆಗಳವರೆಗಿನ ಸುದೀರ್ಘ ಪಯಣವನ್ನು ಕಣ್ಣಿಗೆ ಕಟ್ಟುವಂತೆ ಅನಾವರಣಗೊಳಿಸಿತು. ಹಾಡುಗಳ ಹಿಂದಿನ ಭಾವನೆಗಳು, ಪರಂಪರೆ ಮತ್ತು ತಾಂತ್ರಿಕ ಆಯಾಮಗಳ ಬಗ್ಗೆ ಕಲಾವಿದರು ನಡೆಸಿದ ರಸಮಯ ಸಂವಾದ ಪ್ರೇಕ್ಷಕರ ಚಪ್ಪಾಳೆಗೆ ಪಾತ್ರವಾಯಿತು.

ಕಾರ್ಯಕ್ರಮಕ್ಕೆ ಗಿಟಾರ್‌ನಲ್ಲಿ ಶ್ರೀನಿವಾಸ್ ಆಚಾರ್, ಕೀಬೋರ್ಡ್‌ನಲ್ಲಿ ಉಮೇಶ್ ವಿ, ತಬಲಾದಲ್ಲಿ ಬಿ.ಎಸ್. ವೇಣುಗೋಪಾಲ ರಾಜು, ಡ್ರಮ್ಸ್‌ನಲ್ಲಿ ಪ್ರವೀಣ್ ಎಸ್, ವಯಲಿನ್‌ನಲ್ಲಿ ರಂಜನ್ ಕುಮಾರ್ ಬೆಯುರಾ ಹಾಗೂ ಹಾರ್ಮೋನಿಯಂನಲ್ಲಿ ಪ್ರವೀಣ್ ಡಿ. ರಾವ್ ಅದ್ಭುತ ಹಿನ್ನೆಲೆ ಸಂಗೀತ ಒದಗಿಸಿದರು.

 “ಬಾನಿಗೊಂದು ಎಲ್ಲೆ ಎಲ್ಲಿದೆ..”, “ಮಗಳು ಜಾನಕಿ..” ಟೈಟಲ್ ಸಾಂಗ್ , “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು..” ಸೇರಿದಂತೆ ಹಲವಾರು ಜನಪ್ರಿಯ ಚಲನಚಿತ್ರ ಗೀತೆ, ಸುಗಮ ಸಂಗೀತದ ಹಾಡುಗಳು ಕೇಳುಗರನ್ನು ಮಂತ್ರಮುಗ್ದಗೊಳಿಸಿತು.

Author
Bees Times
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅನುಷ್ಠಾನಕ್ಕೆ ಬಂದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಮಮದಾಪುರ ಕೆರೆ ಮುಳುಗಡೆ ಪ್ರದೇಶ ಸ್ವಾಧೀನ: ಸಂಪುಟಕ್ಕೆ ವಿಷಯ ಮಂಡನೆಬೆಂಗಳೂರಿನ ಹೆಚ್ಎಂಟಿ ಭೂಮಿ ಕೊಳ್ಳೆ ಹೊಡೆದ ಮಹಾಪ್ರಭಾವಿ ಯಾರು? HDK ಪ್ರಶ್ನೆಕನ್ನಡಿಗರನ್ನು ಮತ್ತಷ್ಟು ಕುಡುಕರನ್ನಾಗಿಸುತ್ತೀರಾ?ಎಎಪಿ ಪ್ರಶ್ನೆಸಂಗೀತ- ಸಂವಾದದ ಗಮ್ಮತ್ತು : ಜಯನಗರದಲ್ಲಿ ಭಕ್ತಿ, ಭಾವದ ‘ರಸಂ’ ರಸದೌತಣ!ಕೃತಕ ಬುದ್ಧಿಮತ್ತೆಯು (ಎಐ) ಆ ಗುರಿಯನ್ನೇ ತಪ್ಪನ್ನಾಗಿ ಮಾಡಿದೆ : ಡಾ. ಶ್ರೀಧರ್ ಜಿಕರ್ನಾಟಕದಲ್ಲಿ ಅಕ್ರಮ ಕೇರಳ ಲಾಟರಿ ಹಾವಳಿ ತಕ್ಷಣ ನಿಲ್ಲಿಸಿಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಬೇಡ :ಲೋಖಂಡೆ ಸ್ನೇಹಲ್ ಸುಧಾಕರ್ಭೂಮಿ ಲೂಟಿಗೆ ಮತ್ತೆ ನೋಟಿಫಿಕೇಶನ್ ಹೊರಟಿಸಿದ್ದು ಪಾಶವೀಕೃತ ಎಂದ ಕೇಂದ್ರ ಸಚಿವರುಬರದ ಆಕ್ರಂದನ: ರೈತರ ನೋವನ್ನು ಆಲಿಸಿದ ಜೆಡಿಎಸ್ ಅಧ್ಯಯನ ತಂಡ